Latest

ಪಿಎಸ್ ಐ ಹುದ್ದೆ ಕೊಡಿಸುವುದಾಗಿ 18 ಲಕ್ಷ ರೂಪಾಯಿ ವಂಚನೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪಿಎಸ್ ಐ ಹುದ್ದೆ ಕೆಲಸ ಕೊಡಿಸುವುದಾಗಿ ಹೇಳಿ 18 ಲಕ್ಷ ರೂಪಾಯಿ ವಂಚಿಸಿರುವ ಪ್ರಕರಣ ಬೆಂಗಳೂರಿನ ಸದಾಶಿವನಗರದಲ್ಲಿ ಬೆಳಕಿಗೆ ಬಂದಿದೆ.

ಪುಟ್ಟರಾಜು ಎಂಬುವವರ ಪುತ್ರಿ ಪಿಎಸ್ ಐ ದೈಹಿಕ ಪರೀಕ್ಷೆಯಲ್ಲಿ ಫೇಲ್ ಆಗಿದ್ದರು. ಈ ವೇಳೆ ಕೃಷ್ಣಪ್ಪ ಎಂಬುವವರು ಶ್ರೀನಿವಾಸ್ ಎಂಬಾತನ ಪರಿಚಯಿಸಿ ಪುಟ್ಟರಾಜು ಅವರಿಗೆ ನಿಮ್ಮ ಮಗಳಿಗೆ ಪಿಎಸ್ ಐ ಕೆಲಸ ಕೊಡಿಸುತ್ತೇನೆ ಎಂದು ಹೇಳಿ 50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. 18 ಲಕ್ಷ ರೂಪಾಯಿ ಮುಂಗಡ ಹಣವನ್ನೂ ಪಾವತಿ ಮಾಡಿಸಿಕೊಂಡಿದ್ದರು.

ಪುಟ್ಟರಾಜು, ಸ್ನೇಹಿತ ಕೃಷ್ಣಪ್ಪನನ್ನು ನಂಬಿ ಹಣ ನೀಡಿದ್ದರು. ಆದರೆ ಪಿಎಸ್ ಐ ಪರೀಕ್ಷೆ ಪಾರದರ್ಶಕವಾಗಿರುತ್ತೆ. ಹಣ ಪಾವತಿಸಿ ಮೋಸ ಹೋಗಿದ್ದಾಗಿ ತದನಂತರದಲ್ಲಿ ಪುಟ್ಟರಾಜುಗೆ ಗೊತ್ತಾಗಿತ್ತು. ವಂಚನೆಗೊಳಗಾಗಿದ್ದು ಗೊತ್ತಾಗುತ್ತಿದ್ದಂತೆ ಸದಾಶಿವ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಆನ್ ಲೈನ್ ಗೇಮ್ ನಲ್ಲಿ ಕೋಟ್ಯಂತರ ರೂಪಾಯಿ ಹಣ ಗೆಲ್ಲುವ ಆಮಿಷ; ಡ್ರೀಮ್ ಗೇಮ್ ವಿರುದ್ಧ ಎಫ್ ಐಆರ್ ದಾಖಲು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button