ಪಿಎಸ್ ಐ ಹುದ್ದೆ ಅಕ್ರಮ; ಸಚಿವ ಅಶ್ವತ್ಥನಾರಾಯಣ ವಿರುದ್ಧ ನೇರ ಆರೋಪ ಮಾಡಿದ ವಿ.ಎಸ್.ಉಗ್ರಪ್ಪ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕರ್ನಾಟಕದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದ್ದರೂ ಪ್ರಧಾನಿ ಮೋದಿ ಸುಮ್ಮನಿದ್ದಾರೆ. ಪಿಎಸ್ ಐ ನೇಮಕಾತಿ ಮಾತ್ರವಲ್ಲ, ಕೆಪಿಎಸ್ ಸಿ, ಅಸಿಸ್ಟೆಂಟ್ ಪ್ರೊಫೇಸರ್ ಹುದ್ದೆ ನೇಮಕಾತಿಯಲ್ಲಿಯೂ ಅಕ್ರಮಗಳು ನಡೆದಿವೆ ಸ್ವತ: ಸಚಿವರ ಸಹೋದರ ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್ ಸಂಸದ ವಿ.ಎಸ್.ಉಗ್ರಪ್ಪ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ವಿ.ಎಸ್.ಉಗ್ರಪ್ಪ, ಪಿಎಸ್ ಐ ಹುದ್ದೆ ನೇಮಕಾತಿ ಅಕ್ರಮದಲ್ಲಿ ಕೇಳಿಬರುತ್ತಿರುವ ಸಚಿವರ ಹೆಸರು ಬೇರೆಯಾರೂ ಅಲ್ಲ ಸಚಿವ ಅಶ್ವತ್ಥನಾರಾಯಣ. ಅಶ್ವತ್ಥನಾರಾಯಣ ತಮ್ಮ ಸತೀಶ್ ನೇರವಾಗಿ ಡೀಲ್ ನಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.

ಪಿಎಸ್ ಐ ಅಭ್ಯರ್ಥಿ ದರ್ಶನ್ ಗೌಡ ಆಯ್ಕೆ ಹಿಂದೆ ಸಚಿವ ಅಶ್ವತ್ಥನಾರಾಯಣ ಸಹೋದರ ಸತೀಶ್ ಕೈವಾಡವಿದೆ. ಸಿಐಡಿ ಅಧಿಕಾರಿಗಳು ವಿಚಾರಣೆಗೆ ಬಂದಾಗ ಸಚಿವರೇ ಫೋನ್ ಮಾಡಿ ಅಧಿಕಾರಿಗಳನ್ನು ತಡೆದಿದ್ದಾರೆ. ಹಗರಣದಲ್ಲಿ ಭಾಗಿಯಾದ ದರ್ಶನ್ ಗೌಡ ನನ್ನು ರಕ್ಷಣೆ ಮಾಡಿದರೆ ಇಬ್ಬರೂ ಸೇಫ್ ಆಗಬಹುದು. ಬಂಧನವಾದರೆ ಎಲ್ಲಿ ಸಚಿವ ಸ್ಥಾನಕ್ಕೆ ಸಂಚಕಾರ ಬರುತ್ತೆ ಎಂದು ದರ್ಶನ್ ಗೆ ರಕ್ಷಣೆ ನೀಡಿದ್ದಾರೆ ಎಂದು ಗುಡುಗಿದರು.

ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆ ನೇಮಕಾತಿಯಲ್ಲಿಯೂ ಅಕ್ರಮ ನಡೆದಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ದಿನೇ ದಿನೇ ಹೆಚ್ಚುತ್ತಿದೆ. ಸಚಿವ ಅಶ್ವತ್ಥನಾರಾಯಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಸ್ವತ: ಪ್ರಧಾನಿ ಮೋದಿಯವರು ಸಚಿವರ ರಾಜೀನಾಮೆ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಪಿಎಸ್ ಐ ನೇಮಕಾತಿ ಅಕ್ರಮ: ಮುಖ್ಯಮಂತ್ರಿಗಳ ರೇಸ್ ನಲ್ಲಿರುವ ಮಂತ್ರಿ ವಿರುದ್ಧ ಆರೋಪ; ‘ಆ ಸಚಿವರು’ ಯಾರು?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button