Latest

ಮಾಸಿಕ ಅನುಭಾವ ಸತ್ಸಂಗ ಮಾ.6 ರಂದು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾ ಘಟಕ ಹಾಗೂ ರಾಷ್ಟ್ರೀಯ ಬಸವಸೇನೆ ಜಿಲ್ಲಾ ಘಟಕಗಳ ಆಶ್ರಯದಲ್ಲಿ ಮಾ.೬ ರಂದು ಸಂಜೆ ೬ಕ್ಕೆ ಮಹಾಂತೇಶ ನಗರದ ಮಹಾಂತ ಭವನದಲ್ಲಿ ಮಾಸಿಕ ಅನುಭಾವ ಸತ್ಸಂಗ ಆಯೋಜಿಸಲಾಗಿದೆ.
’ಗಡಿ ಕಾಯುವ ಯೋಧರ ಅನುಭವ’ ಕುರಿತು ಶಿಕ್ಷಕ ಹಾಗೂ ಮಾಜಿ ಯೋಧ ಮರಕುಂಬಿಯ ಸುಬೇದಾರ ರಮೇಶ ಪೂಜಾರಿ ಉಪನ್ಯಾಸ ನೀಡಲಿದ್ದಾರೆ. ಅಕ್ಕಮಹಾದೇವಿ ಉಪ್ಪಿನ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಲಿದ್ದು, ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

Related Articles

Back to top button