Latest

*ಪಿಎಸ್ ಐ ವಿರುದ್ಧ ಕಿರುಕುಳ ಆರೋಪ: ಮನನೊಂದ ವ್ಯಕ್ತಿಯಿಂದ ಠಾಣೆಯ ಮುಂದೆ ಆತ್ಮಹತ್ಯೆಗೆ ಯತ್ನ*

ಪ್ರಗತಿವಾಹಿನಿ ಸುದ್ದಿ: ಪಿಎಸ್ ಐ ಕಿರಿಕುಳಕ್ಕೆ ನೊಂದು ವ್ಯಕ್ತಿಯೋರ್ವ ಪೊಲೀಸ್ ಠಾಣೆ ಮುಂದೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರದ ಹನುಮಾನ್ ಗಲ್ಲಿಯಲ್ಲಿ ನಡೆದಿದೆ.

ಭಾಸ್ಕರ್ ಬೋಂಡೇಲ್ಕರ್ ಆತ್ಮಹತ್ಯೆಗೆ ಯತ್ನಿಸಿ ಸುಟ್ಟಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾಮನಗರ ಪಿಎಸ್ ಐ ಬಸವರಾಜ್ ಹಾಗೂ ಭಾಸ್ಕರ್ ನಡುವೆ ಕಳೆದ ಕೆಲ ದಿನಗಳಿಂದ ವೈಮನಸ್ಸು ಇತ್ತು ಎನ್ನಲಾಗಿದೆ. ಭಾಸ್ಕರ್ ಅವರ ಮಾವ ಗಣಪತಿ ಎನ್ನುವವರಿಗೆ ಪೊಲೀಸರು ಪ್ಲಾಟ್ ವಿಚಾರವಾಗಿ ನೋಟಿಸ್ ನೀಡಿದ್ದರು. ಇದರಿಂದ ಭಾಸ್ಕರ್ ಪೊಲೀಸ್ ಠಾಣೆಗೆ ಬಂದು ತನ್ನ ಮಾವನಿಗೆ ಯಾಕೆ ನೋಟಿಸ್ ಕೊಟ್ಟಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.

ಪಿಎಸ್ ಐ ಬಸವರಾಜ್ ಹಾಗೂ ಭಾಸ್ಕರ್ ನಡುವೆ ಮಾತಿಗೆ ಮಾತು ಬೆಳೆದು ಠಾಣೆಯ ಇತರ ಸಿಬ್ಬಂದಿಗಳು ಭಾಸ್ಕರ್ ಮೊಬೈಲ್ ಕಸಿದುಕೊಂಡಿದ್ದಾರೆ. ಅಲ್ಲದೇ ತನ್ನ ಮೇಲೆ ದೌರ್ಜನ್ಯವೆಸಗಿದ್ದಾರೆ ಎಂದು ಭಾಸ್ಕರ್ ಆರೋಪಿಸಿದ್ದಾರೆ. ನ್ಯಾಯಾಕೊಡಿಸಬೇಕಿದ್ದ ಪೊಲೀಸರೇ ಕಿರುಕುಳ ನೀಡಿದ್ದು ಮನನೊಂದು ಪೆಟ್ರೋಲ್ ಸುರಿದುಕೊಂಡು ಭಾಸ್ಕರ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

Home add -Advt

ಆದರೆ ಪೊಲಿಸರು ಹೇಳುವ ಪ್ರಕಾರ ಭಾಸ್ಕರ್ ರಾತ್ರಿ ಕುಡಿದುಬಂದು ಠಾಣೆಯ ಬಳಿ ಗಲಾಟೆ ಮಾಡಿದ್ದಾರೆ. ಮಾವನಿಗೆ ನೋಟೀಸ್ ಕೊಟ್ಟಿದ್ದು ಯಾಕೆಂದು ತಿಳಿ ಹೇಳಿದರೂ ಅರ್ಥಮಾಡಿಕೊಂಡಿಲ್ಲ. ಪೊಲೀಸ್ ಠಾಣೆಯಲ್ಲಿ ದುರ್ವರ್ತನೆ ತೋರಿದ್ದಾರೆ. ಆತ ಅತಿಯಾಗಿ ಮಧ್ಯಪಾನ ಮಾಡಿದ್ದರಿಂದ ಬೈಕ್ ಕೀ ವಶಕ್ಕೆ ಪಡೆದು ಬೇರೆ ಯಾರನ್ನಾದರೂ ಕರೆಸಿ ಗಾಡಿ ತೆಗೆದುಕೊಂಡು ಹೋಗುವಂತೆ ಹೇಳಿದ್ದೆವು. ಆದರೆ ಕೋಪದ ಬರದಲ್ಲಿ ಭಾಸ್ಕರ್ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣ ಪೊಲೀಸ್ ಸಿಬ್ಬಂದಿಗಳು ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಬೆಳಗಾವಿ ಆಸ್ಪತ್ರೆಯಲ್ಲಿ ಭಾಸ್ಕರ್ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಹೇಳಿದ್ದಾರೆ.


Related Articles

Back to top button