ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: 545 ಪಿಎಸ್ ಐ ಹುದ್ದೆ ನೇಮಕಾತಿ ಮರು ಪರೀಕ್ಷೆ ಇದೇ ತಿಂಗಳು ಜನವರಿ 23ರಂದು ನಡೆಯಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಹಿತಿ ನೀಡಿದೆ. ಅಲ್ಲದೇ ಅಭ್ಯರ್ಥಿಗಳಿಗೆ ಕೆಲ ಕಟ್ಟುನಿತ್ಟಿನ ಸೂಚನೆ ನೀಡಿದೆ.
545 ಪಿಎಸ್ ಐ ಹುದ್ದೆ ನೇಮಕಾತಿ ಪರೀಕ್ಷೆ ವೇಳೆ ಈ ಹಿಂದೆ ಅಕ್ರಮ ನಡೆದ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶದ ಮೇರೆಗೆ ಮರು ಪರೀಕ್ಷೆ ನಡೆಸಲಾಗುತ್ತಿದ್ದು, ಜ.23ರಂದು ಬೆಂಗಳೂರು ಕೇಂದ್ರದಲ್ಲಿ ಮಾತ್ರ ಪರೀಕ್ಷೆ ನಡೆಯಲಿದೆ.
ಜನವರಿ 23ರಂದು ಬೆಳಿಗ್ಗೆ 8:30ಕ್ಕೆ ಎಲ್ಲಾ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಅಂದು ಬೆಳಿಗ್ಗೆ 10:30ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಪೇಪರ್-1 (50) ಅಂಕ. ಮಧ್ಯಾಹ್ನ 1ರಿಂದ 2:30ರವರೆಗೆ ಪೇಪರ್-2 (150) ಅಂಕಗಳ ಪರೀಕ್ಷೆ ನಡೆಯಲಿದೆ
ಅಭ್ಯರ್ಥಿಗಳನ್ನು ಸೂಕ್ತ ತಪಾಸಣೆ ನಡೆಸಲಾಗುವುದು. ನೀರಿನ ಬಾಟಲ್, ಮೊಬೈಲ್ ನಿಷೇಧಿಸಲಾಗಿದೆ. ಸಾಧ್ಯವಾದ್ದಷ್ಟು ಕಾಲರ್ ಇಲ್ಲದ ಶರ್ಟ್ ಹಾಕಿಕೊಂಡು ಬರುವುದು ಉತ್ತಮ. ಕಿವಿ ಹಾಗೂ ಬಾಯಿ ಮುಚ್ಚುವ ಬಟ್ಟೆ, ಜೀನ್ಸ್ , ಬೆಲ್ಟ್, ಶೂ ಧರಿಸಿ ಬರುವಂತಿಲ್ಲ.
ಅಭ್ಯರ್ಥಿಗಳ ಬಳಿ ಪ್ರವೇಶ ಪತ್ರದ ಜೊತೆಗೆ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸನ್ಸ್ ಸೇರಿದಂತೆ ಸರ್ಕಾರದ ಮಾನ್ಯತೆಯ ಯಾವುದಾದರೂ ಒಂದು ಗುರುತಿನ ಚೀಟಿ ಇದ್ದರೆ ಸಾಕು ಎಂದು ಕೆಇಎ ತಿಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ