EducationKannada NewsKarnataka NewsLatest

*ಪದವಿ ಪೂರ್ವ ಶಿಕ್ಷಣ ಇಲಾಖೆ ‘ಶಾಲಾ ಶಿಕ್ಷಣ ಇಲಾಖೆ’ ಎಂದು ಮರುನಾಮಕರಣ; ಕಾಲೇಜುಗಳ ನಾಮಫಲಕ ಬದಲಾಯಿಸುವಂತೆ ಆದೇಶ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನು ‘ಶಾಲಾ ಶಿಕ್ಷಣ ಇಲಾಖೆ’ ಎಂದು ಮರುನಾಮಕರಣ ಮಾಡಲಾಗಿದ್ದು, ಸಂಬಂಧಪಟ್ಟ ಕಚೇರಿ, ಕಾಲೇಜುಗಳ ನಾಮಫಲಕ ಬದಲಾಯಿಸುವಂತೆ ಆದೇಶ ಹೊರಡಿಸಲಾಗಿದೆ.

ಜೂನ್ 28, 2023ರಿಂದ ಬದಲಾವಣೆ ಜಾರಿಯಾಗಿದ್ದು, ಹೊಸ ಪದನಾಮದ ಪ್ರಕಾರ ನಿರ್ದೇಶಕರ ಕಚೇರಿ, ಮತ್ತು ಜಿಲ್ಲಾ ಉಪ ನಿರ್ದೇಶಕರ ಕಚೇರಿಯು ಮರುನಾಮಕರಣವನ್ನು ಒಳಗೊಂಡಿರುತ್ತದೆ.

ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ. ಪ್ರಾಂಶುಪಾಲರು ಹಾಗೂ ಅಧಿಕಾರಿಗಳು ತಮ್ಮ ತಮ್ಮ ಕಚೇರಿ ಹಾಗೂ ಕಾಲೇಜುಗಳ ನಾಮಫಲಕ ನವೀಕರಿಸುವಂತೆ ಸೂಚಿಸಲಾಗಿದೆ.


Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button