Latest

ಅಶ್ಲೀಲ ಆಡಿಯೋಗೆ ಪ್ರಚೋದನೆ; ಯೂಟ್ಯೂಬ್ ಚಾನಲ್ ನೆಡೆಸುತ್ತಿದ್ದ ದಂಪತಿ ಅರೆಸ್ಟ್

ಪ್ರಗತಿವಾಹಿನಿ ಸುದ್ದಿ; ಚೆನ್ನೈ: ಪಬ್ ಜಿ ಗೇಮ್ ಆಡುತ್ತ, ಅಶ್ಲೀಲ ಸಂಭಾಷೆಣೆಗೆ ಪ್ರಚೋದನೆ ನೀಡುತ್ತಾ ಯೂಟ್ಯೂಬ್ ಚಾನಲ್ ನಡೆಸುತ್ತಿದ್ದ ದಂಪತಿಯನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಅಶ್ಲೀಲ ಸಂಭಾಷಣೆ ಮೂಲಕವೇ 75 ಕೋಟಿ ರೂಪಾಯಿ ಸಂಪಾದಿಸಿದ್ದ ದಂಪತಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಅಶ್ಲೀಲ ಆಡಿಯೋ ಮೂಲಕವೇ ಮದನ್ ದಂಪತಿ ಕೇವಲ ಮೂರು ವರ್ಷಗಳಲ್ಲಿ 75 ಕೋಟಿ ರೂಪಾಯಿ ಗಳಿಕೆ ಮಾಡಿದ್ದರು ಎಂಬ ಅಂಶ ಬಹಿರಂಗವಾಗಿದೆ. ಮಹಿಳೆಯರೊಂದಿಗೆ ಪಬ್ ಜಿ ಆಡುತ್ತಾ ಅಶ್ಲೀಲವಾಗಿ ಮಾತನಾಡುತ್ತಾ ಆ ಆಡಿಯೋಗಳನ್ನು ಯುಟ್ಯೂಬ್ ಗಳಲ್ಲಿ ಅಪ್ ಲೋಡ್ ಮಾಡಿ ಹಣ ಸಂಪಾದಿಸುತ್ತಿದ್ದರು ಎಂಬ ಆರೋಪ ಮದನ್ ದಂಪತಿಯ ಮೇಲೆ ಕೇಳಿಬಂದಿತ್ತು. ಪ್ರಕರಣ ಸಂಬಂಧ ಆರೋಪಿ ಮದನ್ ಹಾಗೂ ಪತ್ನಿ ಕೃತಿಕಾಳನ್ನು ಬಂಧಿಸಿರುವ ಪೊಲೀಸರು, ಕೃತಿಕಾ ಬ್ಯಾಂಕ್ ಖಾತೆಯಲ್ಲಿದ್ದ 4 ಕೋಟಿ ರೂಪಾಯಿಯನ್ನು ಜಪ್ತಿ ಮಾಡಿದ್ದಾರೆ. ಅಲ್ಲದೇ ಮದನ್ ಹೆಸರಲ್ಲಿದ್ದ ಮೂರು ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿ ಮದನ್ ಚೆನ್ನೈನ ವೆಂಗೌವಾಸಲ್ ಮೂಲದವನಾಗಿದ್ದು, ಎಂಜಿನಿಯರಿಂಗ್ ಪದವಿಧರ. ಪತ್ನಿ ಸಹಾಯದಿಂದ 12ಕ್ಕೂ ಹೆಚ್ಚು ಯೂಟ್ಯೂಬ್ ಚಾನಲ್ ಗಳನ್ನು ನಡೆಸುತ್ತಿದ್ದ ಈತ, ಪಬ್ ಜಿ ಆಟವಾಡುವಾಗ ಮಹಿಳೆಯರೊಂದಿಗೆ ಅಶ್ಲೀಲವಾಗಿ ಮಾತನಾಡಿ ಅದನ್ನು ರೆಕಾರ್ಡ್ ಮಾಡಿ ಯೂಟ್ಯೂಬ್ ಚಾನಲ್ ನಲ್ಲಿ ಹರಿಬಿಡುತ್ತಿದ್ದ. ಆತನ ಚಾನಲ್ ಗೆ ಚಂದಾದಾರರಾಗುವವರಿಂದ ಆತನ ಆದಾಯ ದುಪ್ಪಟ್ಟಾಗಿತ್ತಲ್ಲದೇ ತನ್ನ ಜೊತೆ ಅಶ್ಲೀಲವಾಗಿ ಮಾತನಾಡುವ ಮಹಿಳೆಯರಿಗೆ 5 ಲಕ್ಷ ರೂವರೆಗೂ ಹಣ ನೀಡುತ್ತಿದ್ದ ಎನ್ನಲಾಗಿದೆ. ಮದನ್ ಜೊತೆ ಸಂತ್ರಸ್ತ ಮಹಿಳೆಯೊಬ್ಬಳು ನಡೆಸಿದ್ದ ಅಶ್ಲೀಲ ಸಂಭಾಷಣೆ ಸೋರಿಕೆ ಮಾಡಿದ್ದ ಬೆನ್ನಲ್ಲೇ ಮಹಿಳೆ ಮದನ್ ವಿರುದ್ಧ ದೂರು ದಾಖಲಿಸಿದ್ದರು.
ಪ್ರಯಾಣಿಕರ ಗಮನಕ್ಕೆ; ಈ ನಿಯಮ ಪಾಲಿಸಿ ನಾಳೆಯಿಂದ ಬಸ್ ನಲ್ಲಿ ಸಂಚರಿಸಿ…

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button