*ಗೃಹಲಕ್ಷ್ಮೀ ಯೋಜನೆಯಿಂದ ಸಹಾಯವಾಯಿತು; ದ್ವಿತೀಯ ಪಿಯುಸಿ ರ್ಯಾಂಕ್ ವಿಜೇತ*
ಪ್ರಗತಿವಾಹಿನಿ ಸುದ್ದಿ: ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದ್ದಿದ್ದು, ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಮೂವರು ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಅವರಲ್ಲಿ ವಿಜಯಪುರ ಜಿಲ್ಲೆಯ ವೇದಾಂತ್ ಕೂಡ ಓರ್ವ . 556 ಅಂಕಗಳನ್ನು ಪಡೆದುಕೊಂಡಿರುವ ವೇದಾಂತ್ ಗೃಹಲಕ್ಷ್ಮೀ ಯೋಜನೆ ತನ್ನ ವಿದ್ಯಾಭ್ಯಾಸಕ್ಕೆ ಅನುಕೂಲವಾಯಿತು ಎಂದು ತಿಳಿಸಿದ್ದಾನೆ.
ವಿಜಯ ಪುರದ ಎಸ್ ಎಸ್ ಕಾಲೇಜಿನ ವಿದ್ಯಾರ್ಥಿಯಾಗಿರುವ ವೇದಾಂತ್, ಸುದ್ದಿಗಾರರೊಂದಿಗೆ ಮಾತನಾಡಿದ್ದು, ತಾನು ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿರುವುದು ಖುಷಿಯಾಗಿದೆ. ಪರೀಕ್ಷೆಗೆ ಆರು ತಿಂಗಳ ಮೊದಲು ಶಾಸ್ತ್ರಿ ನಗರದ ಬಿಸಿಎಂ ಹಾಸ್ಟೇಲ್ ನಲ್ಲಿದ್ದು ಓದಿಕೊಳ್ಳುತ್ತಿದ್ದೆ. ಅದ್ಯಾಪಕರು, ಮನೆಯವರೆಲ್ಲರ ಸಹಕಾರದಿಂದ ಓದಿ ಪ್ರಥಮ ಸ್ಥಾನ ಬರಲು ಸಾಧ್ಯವಾಯಿತು ಎಂದಿದ್ದಾರೆ.
ತಂದೆ ಅಗಲಿದ್ದು, ತಾಯಿಯೇ ದುಡಿದು ಓದಿಸುತ್ತಿದ್ದಾರೆ. ಸ್ವಲ್ಪ ಹೊಲಗದ್ದೆಗಳಿದ್ದು ಅದನ್ನೂ ನೋಡಿಕೊಳ್ಳಬೇಕು. ಗೃಹಲಕ್ಷ್ಮೀ ಯೋಜನೆಯಿಂದ ತಿಂಗಳಿಗೆ 2000 ರೂಪಾಯಿ ಬರುತ್ತಿರುವುದರಿಂದ ಬಹಳ ಸಹಾಯವಾಯಿತು. ಸರ್ಕಾರದ ಗ್ಯಾರಂಟಿ ಯೋಜನೆಗಳು ನಮಗೆ ಸಾಕಷ್ಟು ಅನುಕೂಲವಾಗುತ್ತಿದೆ. ಜೊತೆಗೆ ಕೇಂದ್ರದ ಫಸಲ್ ಭೀಮಾ ಯೋಜನೆಯೂ ಅನುಕೂಲಕರವಾಗಿದೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ