Karnataka News

*ದ್ವಿತೀಯ ಪಿಯುಸಿ ವಿದ್ಯಾರ್ಥಿ ನಾಪತ್ತೆ ಕೇಸ್ ಗೆ ಟ್ವಿಸ್ಟ್*

ಪ್ರಗತಿವಾಹಿನಿ ಸುದ್ದಿ: ನಿಗೂಢವಾಗಿ ನಾಪತ್ತೆಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿ ದಿಗಂತ್ ನಾಪತ್ತೆ ಕೇಸ್ ಗೆ ಟ್ವಿಸ್ಟ್ ಸಿಕ್ಕಿದೆ.

ಫೆ.25ರ ಸಂಜೆ ಹಾಲ್ ಟಿಕೆಟ್ ಮನೆಗೆ ತಂಡಿಟ್ಟು ಹೊರ ಹೋಗಿದ್ದ ವಿದ್ಯಾರ್ಥಿ ದಿಗಂತ್ ಏಕಾಏಕಿ ನಾಪತ್ತೆಯಾಗಿದ್ದ. ಇದೀಗ 12 ದಿನಗಳ ಬಳಿಕ ಉಡುಪಿಯ ಡಿಮಾರ್ಟ್ ಮಾಲ್ ನಲ್ಲಿ ಪತ್ತೆಯಾಗಿದ್ದಾನೆ.

ಸದ್ಯ ವಿದ್ಯಾರ್ಥಿ ನಾಪತ್ತೆ ಪ್ರಕರಣ ಸುಖಾಂತ್ಯಕಂಡಿದೆ. ತಾನು ಮನೆ ಬಿಟ್ಟಲು ಹೋಗಲು ಕಾರಣವೇನು ಎಂಬುದನ್ನು ವಿದ್ಯಾರ್ಥಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.

Home add -Advt

ಪರೀಕ್ಷೆ ಭಯದಿಂದಾಗಿ ಮನೆ ಬಿಟ್ಟು ಹೋಗಿದ್ದೆ ಎಂದು ತಿಳಿಸಿದ್ದಾನೆ. ಹೀಗೆ ಫೆ.25ರಂದು ಮನೆ ಬಿಟ್ಟು ಹೋಗಿದ್ದ ದಿಗಂತ್ ರೈಲ್ವೆ ಟ್ರ್ಯಾಕ್ ಬಳಿ ಚಪ್ಪಲಿ ಬಿಟ್ಟು ಶೂ ಧರಿಸಿಕೊಂಡು ಹೋಗಿದ್ದಾನೆ. ಅಲ್ಲಿ ಅಪರಿಚಿತರ ಬೈಕ್ ಹತ್ತಿ ಮಂಗಳೂರಿಗೆ ತೆರಳಿ ಮಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗಿದ್ದಾನೆ. ಬಳಿಕ ಶಿವಮೊಗ್ಗದಿಂದ ಮೈಸೂರಿಗೆ ತೆರಳಿ ಅಲ್ಲಿಂದ ಬೆಂಗಳೂರಿಗೆ ಹೋಗಿದ್ದಾನೆ. ನಂದಿಬೆಟ್ಟಕ್ಕೆ ತೆರಳಿ ಅಲ್ಲಿಯ ಹೋಟೆಲ್ ಒಂದರಲ್ಲಿ ಮೂರು ದಿನ ಕೆಲದ್ಸ ಮಾಡಿ 3000 ರೂಪಾಯಿ ಸಂಪಾದಿಸಿದ್ದಾನೆ.

ಬಳಿಕ ವಿವಿಧೆಡೆ ಸುತ್ತಾಡಿ ಶನಿವಾರ ಮಾರ್ಚ್ 8ರಂದು ಬೆಂಗಳೂರಿನಿಂದ ಮುರುಡೇಶ್ವರ ಎಕ್ಸ್ ಪ್ರೆಸ್ ರೈಲು ಹತ್ತಿ ಉಡುಪಿಗೆ ತಲುಪಿದ್ದಾನೆ. ಸದ್ಯ ವಿದ್ಯಾರ್ಥಿ ದಿಗಂತ್ ಪತ್ತೆಯಾಗಿದ್ದು, ಪೋಷಕರು ನಿಟ್ಟುಸಿರುಬಿಟ್ಟಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button