ಪಲ್ಸ ಪೊಲಿಯೊ ಕಾರ್ಯಕ್ರಮ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮಕ್ಕಳು ದೇಶದ ಆಸ್ತಿ ಅವರನ್ನು ಪೋಲಿಯೋ ರೋಗದಿಂದ ಮುಕ್ತಗೊಳಿಸಲು ಲಸಿಕೆ ಕೊಡಿಸುವ ಮೂಲಕ ಆರೋಗ್ಯವಂತರನ್ನಾಗಿಸೋಣ ಎಂದು ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕರಾದ ಡಾ. ಎಸ್ ಸಿ ಧಾರವಾಡ ಕರೆನೀಡಿದ್ದಾರೆ.
ಅವರು ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಆವರಣದಲ್ಲಿ ನಡೆದ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕೆ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಪಲ್ಸ್ ಪೋಲಿಯೊ ಲಸಿಕೆ ವಿತರಣಾ ಕಾರ್ಯಕ್ರಮ ಇದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು ಇಂದು ರಾಜ್ಯದೆಲ್ಲೆಡೆ ೬೪ ಲಕ್ಷ ಮಕ್ಕಳಿಗೆ ನೀಡುವ ಉದ್ದೇಶವನ್ನು ಹೊಂದಿದೆ. ಈ ನಿಟ್ಟಿನಲ್ಲಿ ರಾಜ್ಯದೆಲ್ಲೆಡೆ ಸುಮಾರು ೩೩ ಸಾವಿರ ಲಸಿಕಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ನಾವೂ ಒಬ್ಬರು ಎಂದು ಗುರುತಿಸಿಕೊಳ್ಳಲು ನಿಜಕ್ಕೂ ಸಂತಸವೆನ್ನಿಸುತ್ತದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅತಿಥಿಳಾಗಿ ಆಗಮಿಸಿದ್ದ ಹಿರಿಯ ನಾಗರಿಕರ ಸಂಘದ ಮಾಜಿ ಅಧ್ಯಕ್ಷ ಪ್ರಭಾಕರ ಕುಲಕರ್ಣಿ ಅವರು ಮಾತನಾಡುತ್ತ, ಸುಧೃಢ ಆರೋಗ್ಯ ಮತ್ತು ಶಿಕ್ಷಣ ಇವು ಮಗುವಿನ ಜನ್ಮಸಿದ್ದ ಹಕ್ಕಾಗಿದೆ. ಯಾವುದೇ ಮಗು ಪೊಲಿಯೊ ೨ ಹನಿಗಳಿಂದ ವಂಚಿತರಾಗದಂತೆ ನೋಡಿಕೊಂಡು ಮಕ್ಕಳು ಜೀವನವೆಲ್ಲಾ ಸಂತಸದಿಂದಿರುವಂತೆ ನೋಡಿಕೊಳ್ಳುವುದು ಪೋಷಕರ ಆದ್ಯ ಕರ್ತವ್ಯವಾಗಿದೆ. ಆರೋಗ್ಯದ ವಿಷಯಕ್ಕೆ ಬಂದಾಗ ಯಾವುದೇ ರೀತಿಯ ನಿರ್ಲಕ್ಷ್ಯ ಸಲ್ಲದು. ಪಲ್ಸ್ ಪೊಲಿಯೊ ಲಸಿಕೆಯು ವೈಜ್ಞಾನಿಕ ಮನ್ನಣೆಯನ್ನು ಪಡೆದಿದ್ದು ಯಾವುದೇ ಅಳುಕಿಲ್ಲದೇ ಹಾಕಿಸಿ ಸುಧೃಢ ಹಾಗೂ ಆರೋಗ್ಯವಂತ ಸಮಾಜ ನಿರ್ನಾಮಮಾಡಲು ಎಲ್ಲ ಪೋಷಕರು ಕೈ ಜೋಡಿಸಿ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿಶೇಷವೆಂಬಂತೆ ವೈದ್ಯ ತಂದೆ, ತಾಯಂದಿರು ತಮ್ಮ ಮಕ್ಕಳಿಗೆ ತಮ್ಮ ಕೈಯಾರೆ ಪೋಲಿಯೊ ಹನಿಗಳನ್ನು ತಾವೇ ಹಾಕಿದರು.
ಕಾರ್ಯಕ್ರಮದಲ್ಲಿ ಬೇಳಗಾವಿ ಪಿಡಿಯಾಟ್ರಿಕ್ ಅಸೋಶಿಯೇಷನ್ ನ ಖಜಾಂಚಿ ಡಾ. ಭಾವನಾ ಕೊಪ್ಪದ , ಡಾ. ಸೋನಾಲಿ ಬೆಗಾವಿ, ಪಿಡಿಯಾಟ್ರಿಕ್ ಅಸೋಶಿಯೇಷನ್ ನ ಟ್ರೆಸರರ್, ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ. ಎಮ್ ಎಸ್ ಕಡ್ಡಿ, ಮಕ್ಕಳ ತಜ್ಞರಾದ ಡಾ. ಸಂತೋಷಕುಮಾರ ಕರಮಸಿ, ಡಾ. ಸೌಮ್ಯಾ ವೇರ್ಣೆಕರ, ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಸಂತೋಷ ಇತಾಪೆ, ಪ್ರಭಾವತಿ ಪಾಟೀಲ ಮುಂತಾದವರು ಉಪಸ್ಥಿತರಿದ್ದರು. ಇಂದಿನ ಶಿಬಿರದಲ್ಲಿ ೧೦೮ ಮಕ್ಕಳಿಗೆ ಪೊಲಿಯೋ ಹನಿಗಳನ್ನು ಹಾಕಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ