Latest

ಪುನೀತ್ ಪುಣ್ಯಸ್ಮರಣೆ; ಅಭಿಮಾನಿಗಳಿಗಾಗಿ ದೊಡ್ಮನೆಯಿಂದ ಅನ್ನ ಸಂತರ್ಪಣೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿ ಇಂದಿಗೆ 12ನೇ ದಿನ. ಪುನೀತ್ ರಾಜ್ ಕುಮಾರ್ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಇಂದು ಅಭಿಮಾನಿಗಳಿಗಾಗಿ ಡಾ.ರಾಜ್ ಕುಮಾರ್ ಕುಟುಂಬದಿಂದ ಅನ್ನಸಂತರ್ಪಣೆ ಆಯೋಜಿಸಲಾಗಿದೆ.

ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಅನ್ನ ಸಂತರ್ಪಣೆಗೆ ಸಕಲ ಸಿದ್ಧತೆ ನಡೆದಿದ್ದು, ಬೆಳಿಗ್ಗೆ 11 ಗಂಟೆಯಿಂದ ಅನ್ನಸಂತರ್ಪಣೆ ಆರಂಭವಾಗಲಿದೆ. ವೆಜ್ ಹಾಗೂ ನಾನ್ ವೆಜ್ ಊಟದ ವ್ಯವಸ್ಥೆ ಮಾಡಲಾಗಿದೆ.

ಸಸ್ಯಾಹಾರಿಗಳಿಗಾಗಿ ಘೀ ರೈಸ್, ವೆಜ್ ಕುರ್ಮಾ, ಅಕ್ಕಿ ಪಾಯಸ, ಆಲೂ ಕಬಾಬ್, ಗೋಬಿ ಮಂಚೂರಿ, ಮಸಾಲಾ ವಡೆ, ಅನ್ನ, ಸಾಂಬಾರ್, ರಸಂ, ಹಪ್ಪಳದ ಊಟ ಸಿದ್ಧಪಡಿಸಲಾಗಿದೆ. ಇನ್ನು ಮಾಂಸಾಹಾರಿಗಳಿಗಾಗಿ ಚಿಕನ್ ಚಾಪ್ಸ್, ಕಬಾಬ್, ಮೊಟ್ಟೆ, ಘೀ ರೈಸ್, ಅನ್ನ, ರಸಂ, ಅಕ್ಕಿ ಪಾಯಸ ಸಿದ್ಧಪಡಿಸಲಾಗಿದೆ. 4 ಸಾವಿರ ಮಾಂಸಾಹಾರಿ ಹಾಗೂ 1 ಸಾವಿರ ಸಸ್ಯಾಹಾರಿ ಕೌಂಟರ್ ಗಳನ್ನು ತೆರೆಯಲಾಗಿದ್ದು, 5 ಸಾವಿರ ಕುರ್ಚಿ, ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಊಟ ಬಡಿಸಲು 750 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಕುಂಭದ್ರೋಣ ಮಳೆಗೆ ತಮಿಳುನಾಡು ತತ್ತರ; ನಾಲ್ವರು ಸಾವು

Home add -Advt

Related Articles

Back to top button