Latest

ಇಬ್ಬರ ಬಾಳಿಗೆ ಬೆಳಕಾದ ಪವರ್ ಸ್ಟಾರ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನದಿಂದ ಇಡೀ ಕರುನಾಡೇ ಶೋಕಸಾಗರದಲ್ಲಿ ಮುಳುಗಿದೆ. ತಂದೆ ಡಾ.ರಾಜಕುಮಾರ್ ಹಾದಿಯಲ್ಲಿ ಸಾಗಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನೇತ್ರದಾನ ಮಾಡುವ ಮೂಲಕ ಇಬ್ಬರ ಬದುಕಿಗೆ ಬೆಳಕಾಗಿದ್ದಾರೆ.

ಪುನೀತ್ ರಾಜ್ ಕುಮಾರ್ ನೇತ್ರದಾನದ ಮೂಲಕ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ. ಪುನೀತ್ ಕಣ್ಣುಗಳನ್ನು ಇಬ್ಬರಿಗೆ ಅಳವಡಿಸುವ ಮೂಲಕ ಬೆಂಗಳೂರಿನ ನಾರಾಯಾಣ ನೇತ್ರಾಲಯದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ನಾರಾಯಣ ನೇತ್ರಾಲಯದ ವೈದ್ಯರು ನಿನ್ನೆ ಪುನೀತ್ ರಾಜ್ ಕುಮಾರ್ ಅವರ ಒಂದು ಕಣ್ಣನ್ನು ಒಬ್ಬರಿಗೆ ಅಳವಡಿಸಿದ್ದರು, ಇಂದು ಮತ್ತೊಬ್ಬರಿಗೆ ಒಂದು ಕಣ್ಣನ್ನು ಅಳವಡಿಸುವ ಮೂಲಕ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ನನ್ನ ಮಗನನ್ನೇ ಕಳೆದುಕೊಂಡಷ್ಟು ನೋವಾಗಿದೆ; ಕಣ್ಣೀರಿಟ್ಟ ಶಿವಣ್ಣ

Home add -Advt

Related Articles

Back to top button