Latest

ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪತಿಯನ್ನೇ ಹತ್ಯೆಗೈದ ಪತ್ನಿ

ಪ್ರಗತಿವಾಹಿನಿ ಸುದ್ದಿ; ಚಂಡೀಗಢ: ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪತಿಯನ್ನು ಪತ್ನಿಯೇ ಹತ್ಯೆಗೈದಿರುವ ಘಟನೆ ಪಂಜಾಬ್‍ನ ಲುಧಿಯಾನದಲ್ಲಿ ನಡೆದಿದೆ.

ಇಲ್ಲಿನ ಸುಂದರ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಆರೋಪಿ ಮಹಿಳೆ ಎರಡನೆ ಮದುವೆಯಾಗಿದ್ದಳು. ಎರಡನೇ ಪತಿಯ ಜತೆ ಈಕೆಯ 20 ವರ್ಷದ ಮಗ ಮತ್ತು 15 ವರ್ಷದ ಮಗಳ ಜತೆ ವಾಸವಾಗಿದ್ದಳು.

ಶನಿವಾರ ರಾತ್ರಿ ಮೃತ ವ್ಯಕ್ತಿ ಕುಡಿದು ಬಂದು ಮಗಳ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಅಲ್ಲದೇ ಪತ್ನಿ ಹಾಗೂ ಮಗನಿಗೆ ಬೆದರಿಕೆ ಹಾಕಿ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದರಿಂದ ಕೋಪಗೊಂಡ ಪತ್ನಿ ಅಲ್ಲೇ ಇದ್ದ ವಯರ್‌ನಿಂದ ಗಂಡನ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾಳೆ. ಇಬ್ಬರು ಮಕ್ಕಳು ಆಕೆಗೆ ಸಹಾಯ ಮಾಡಿದ್ದಾರೆ ಎಂದು ಎಸಿಪಿ ಗುರ್ಬಿಂದರ್ ಸಿಂಗ್ ತಿಳಿಸಿದರು.

ಮೃತ ವ್ಯಕ್ತಿ 2014 ರಲ್ಲಿ ತನ್ನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿದ್ದ. ಈ ಕುರಿತು ಆತನ ವಿರುದ್ಧ ಟಿಬ್ಬಾ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿತ್ತು. ಆರು ತಿಂಗಳು ಜೈಲಿನಲ್ಲಿದ್ದ ವ್ಯಕ್ತಿ ನಂತರ ಕುಟುಂಬವು ರಾಜಿ ಮಾಡಿಕೊಂಡಿದ್ದರಿಂದ ಜೈಲಿನಿಂದ ಹೊರಬಂದಿದ್ದ. ಆದರೆ ಸಂತ್ರಸ್ತೆ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಳು.

Home add -Advt

ಪತಿಯನ್ನೇ ಹತ್ಯೆಗೈದ ಮಹಿಳೆ, ಆಕೆಯ ಮಗ ಮತ್ತು ಅಪ್ರಾಪ್ತ ಮಗಳ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

Related Articles

Back to top button