ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಪುಣ್ಣಟ್ಟ ಕಣಗಾಲ್ ಅವರದು ಎಂದೆಂದೂ ಮರೆಯದ ಹೆಸರು ಅವರು ಕನ್ನಡದ ಕೀರ್ತಿಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಮಹೇಶ ಜೋಶಿಯವರು ಬಣ್ಣಿಸಿದರು.
ಪುಟ್ಟಣ್ಣ ಕಣಗಾಲ್ ಜನ್ಮದಿನದ ಸಂಭ್ರಮದ ಹಿನ್ನೆಲೆಯಲ್ಲಿ ʻಜನುಮ ಜನುಮದ ಅನುಬಂಧʼ ಎನ್ನುವ ವಿನೂತನ ಅವರು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಪುಟ್ಟಣ್ಣ ಕಣಗಾಲ್ (ಟ್ರಸ್ಟ್) ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣ ರಾಜ ಪರಿಷತ್ತಿನ ಮಂದಿರದಲ್ಲಿ ಜಂಟಿಯಾಗಿ ಏರ್ಪಡಿಸಿದ್ದ ಪುಟ್ಟಣ್ಣ ಕಣಗಾಲ್ ಅವರ ಜನ್ಮದಿನದ ಸಂಭ್ರಮ ‘ಜನುಮ ಜನುಮದ ಅನುಬಂಧ’ ಕಾರ್ಯಕ್ರಮಕಾರ್ಯಕ್ರಮವನ್ನು ಪುಟ್ಟಣ್ಣ ಕಣಗಾಲ್ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ನಾಗಲಕ್ಷ್ಮೀ ಪುಟ್ಟಣ್ಣ ಕಣಗಾಲ್, ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಅವರು ಕಾರ್ಯಕ್ರಮದ ಉದ್ಘಾಟಿಸಿದರು . ಈ ವೇಳೆ ಪ್ರಾಸ್ತಾವಿಕ ಭಾಷಣವನ್ನು ಮಾಡಿದ ಅವರು ಡಾ.ಮಹೇಶ ಜೋಶಿ, ‘ ಗೆಜ್ಜೆಪೂಜೆ’ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಚಿತ್ರಮಂದಿರಗಳ ಹೊರಗೆ ಕರವಸ್ತ್ರಗಳನ್ನು ಮಾರಾಟ ಮಾಡಲು ವ್ಯವಸ್ಥೆ ಮಾಡಿದ್ದನ್ನು ಸ್ಮರಿಸಿ ಚಿತ್ರವೊಂದು ಜನ ಸಾಮಾನ್ಯರ ಮೇಲೆ ತನ್ನ ನೈಜತೆಯಿಂದ ಎಂತಹ ಪರಿಣಾಮವನ್ನು ಉಂಟು ಮಾಡ ಬಹುದು ಎನ್ನುವುದಕ್ಕೆ ಪುಟ್ಟಣ್ಣನವರ ಚಿತ್ರಗಳೇ ಸಾಕ್ಷಿ ಎಂದರು.
ಪುಟ್ಟಣ್ಣನವರು ಹುಟ್ಟು ಹಾಕಿದ ಕಲಾವಿದರೆಲ್ಲರೂ ಎತ್ತರಕ್ಕೆ ಬೆಳೆದರು ರಜನೀಕಾಂತ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದರು ಎಂದು ಅವರು ಉಲ್ಲೇಖಿಸಿದರು.
ಚಿತ್ರ ನಟ ಶ್ರೀನಾಥ್ ಮಾತನಾಡಿ ಪುಟ್ಟಣ್ಣನವರು ನನಗೆ ಮರುಜನ್ಮ ನೀಡಿದ ಗುರು ಅವರು ಒಂದು ರೀತಿಯಲ್ಲಿ ವಿದ್ಯೆಯ ಪರ್ವತ ಅವರು ಕಲಿಸಿದ್ದರಲ್ಲಿ ಶೇ 40ರಷ್ಟನ್ನು ತಮ್ಮಿಂದ ಮಾಡಲು ಆಗಲಿಲ್ಲ. ಸದಾ ಪರಿಪೂರ್ಣತೆಗೆ ಅವರು ತುಡಿಯುತ್ತಿದ್ದರು ಎಂದರು.
ಚಿತ್ರನಟ ರಾಮಕೃಷ್ಣ ಮಾತನಾಡಿ ಪುಟ್ಟಣ್ಣನವರಿಂದ ಬೆಳೆದವರ ಹೆಸರಿನಲ್ಲಿ ಸ್ಮಾರಕಗಳಿವೆ ಆದರೆ ಅವರ ಹೆಸರಿನಲ್ಲಿಯೇ ಸೂಕ್ತ ಸ್ಮಾರಕವಿಲ್ಲ ಅದಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಅಭಿಪ್ರಾಯಪಟ್ಟರು.
ಹಿರಿಯ ಛಾಯಾಗ್ರಾಹಕ ಬಸವರಾಜ್, ಪ್ರಗತಿ ಅಶ್ವತ್ಥ ನಾರಾಯಣ, ಕಲಾವಿದಯರಾದ ಪದ್ಮಾವಾಸಂತಿ, ರೇಖಾರಾವ್, ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ನಂಜುಡೇ ಗೌಡ, ಕಾರ್ಯ ನಿರತ ಪತ್ರಕರ್ತರ ಸಂಘದಅಧ್ಯಕ್ಷ ಶಿವಾನಂದ ತಗಡೂರು ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪುಟ್ಟಣ್ಣ ಕಣಗಾಲ್ ಅವರ ಶ್ರೀಮತಿ ನಾಗಲಕ್ಷ್ಮಿ ಕಣಗಾಲ್ , ಪುಟ್ಟಣ್ಣ ಕಣಗಾಲ್ ಅವರ ಮೂವರು ಪುತ್ರಿಯರು ಸೇರಿದಂತೆ ಅವರ ಕುಟುಂಬ ವರ್ಗದವರು ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದು ವಿಶೇಷವಾಗಿತ್ತು. ಖ್ಯಾತ ಗಾಯಕಿ ಸ್ಮಿತಾ ಕಾರ್ತಿಕ್ ಅವರ ತಂಡದವರು ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳಿಂದ ಆಯ್ದ ಗೀತೆಗಳನ್ನು ಸುಮಧುರವಾಗಿ ಹಾಡಿ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರನ್ನು ರಂಜಿಸಿದರು.
ವೃದ್ಧೆಯನ್ನು ಕೊಲೆಗೈದು ಕಬೋರ್ಡ್ ನಲ್ಲಿ ಶವವಿಟ್ಟು ಎಸ್ಕೇಪ್ ಆದ ಮಹಿಳೆ
https://pragati.taskdun.com/80-years-old-womanmurderbangaloreanekalattibele/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ