ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಬೆನ್ನು ನೋವಿನ ವ್ಯಾಧಿ ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯ. ಆಧುನಿಕ ಜೀವ ಶೈಲಿ ಅನೇಕ ಜನರಲ್ಲಿ ಈ ಸಮಸ್ಯೆ ಉಂಟು ಮಾಡಿದ್ದು ಹಲವು ಜನ ಶಸ್ತ್ರ ಚಿಕಿತ್ಸೆ ಮೊರೆ ಹೋಗಿ ನಾನಾ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.
ಆದರೆ ಬೆನ್ನುನೋವಿನ ಹೊಸ ಪರೀಕ್ಷೆಯೊಂದು 10 ಸಾವಿರಕ್ಕೂ ಅಧಿಕ ಜನರಿಗೆ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆ ತಪ್ಪಿಸಲು ಸಹಾಯ ಮಾಡಿದೆ.
ಬೆನ್ನು ಮತ್ತು ಕುತ್ತಿಗೆಯಲ್ಲಿನ ದುರ್ಬಲ ಪ್ರದೇಶಗಳನ್ನು ನಿಖರವಾಗಿ ಗುರುತಿಸಲು ಡಿಜಿಟಲ್ ಸ್ಪೈನ್ ಅನಾಲಿಸಿಸ್ (DSA) ಎಂಬ ಶಸ್ತ್ರಚಿಕಿತ್ಸೆಯಿಲ್ಲದೆ ಬೆನ್ನುನೋವಿನ ಚಿಕಿತ್ಸೆಯಲ್ಲಿ ಬೆನ್ನುಮೂಳೆ ತಜ್ಞರ ತಂಡ ಪ್ರಗತಿ ಕಂಡುಕೊಂಡಿದೆ ಎಂದು QI ಸ್ಪೈನ್ ನವರು ಹೇಳಿಕೊಂಡಿದ್ದಾರೆ.
ಈ ಹೊಸ ಮಾದರಿಯ ಚಿಕಿತ್ಸೆ QI ಸ್ಪೈನ್ ನ 300ಕ್ಕೂ ಅಧಿಕ ವೈದ್ಯರ ಅನುಭವಗಳ ಸಂಯೋಜನೆಯಾಗಿದೆ. ಇದು ಅತ್ಯಂತ ನಿಖರವಾದ ರೋಗನಿರ್ಣಯವನ್ನು ನೀಡುವ ಗುರಿ ಹೊಂದಿದೆ ಎನ್ನಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಜನರ ಕನಸು ನನಸು; ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸರ್ಕಾರದ ಸಮ್ಮತಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ