LatestUncategorized

*BJP ಅಷ್ಟೊಂದು ಬರಗೆಟ್ಟಿಲ್ಲ; ರಮ್ಯಾಗೆ ತಿರುಗೇಟು ನೀಡಿದ ಸಚಿವ ಆರ್.ಅಶೋಕ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿಜೆಪಿ ನನಗೆ ಆಹ್ವಾನ ನೀಡಿತ್ತು, ಬಿಗ್ ಆಫರ್ ಕೊಟ್ಟಿತ್ತು ಎಂಬ ನಟಿ ರಮ್ಯಾ ಹೇಳಿಕೆಗೆ ತಿರುಗೇಟು ನೀಡಿರುವ ಕಂದಾಯ ಸಚಿವ ಆರ್.ಅಶೋಕ್, ಬಿಜೆಪಿ ಅಷ್ಟೊಂದು ಬರಗೆಟ್ಟಿಲ್ಲ ಎಂದು ಹೇಳಿದ್ದಾರೆ

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆರ್,ಅಶೋಕ್, ಬಿಜೆಪಿಯಿಂದ ನಟಿ ರಮ್ಯಾಗೆ ಅಹ್ವಾನ, ಮಂತ್ರಿ ಮಾಡುವ ಆಫರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ನಟಿ ರಮ್ಯಾರನ್ನು ನಮ್ಮ ಪಕ್ಷಕ್ಕೆ ಆಹ್ವಾನ ಮಾಡುವಷ್ಟು ಬಿಜೆಪಿ ಬರಗೆಟ್ಟಿಲ್ಲ ಎಂದು ತಿಳಿಸಿದ್ದಾರೆ.

ನಮ್ಮ ಪಕ್ಷ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಲಕ್ಷ್ಮಣ ಸವದಿಯವರಿಗೆ ಟಿಕೆಟ್ ನೀಡಿಲ್ಲ, ಇನ್ನು ರಮ್ಯಾರನ್ನು ಬಿಜೆಪಿಗೆ ಆಹ್ವಾನಿಸಿ, ಮಂತ್ರಿ ಸ್ಥಾನ ಕೊಡ್ತೀವಿ? ಎಂದು ಪ್ರಶ್ನಿಸಿದ್ದಾರೆ. ರಮ್ಯಾ ಕಾಂಗ್ರೆಸ್ ನಲ್ಲಿದ್ದವರು. ಮಾಜಿ ಸಂಸದೆ, ಈಗ ಕಾಂಗ್ರೆಸ್ ಸ್ಟಾರ್ ಪ್ರಚಾರಕರಾಗಿದ್ದಾರೆ. ನಾವ್ಯಾಕೆ ರಮ್ಯಾರನ್ನು ನಮ್ಮ ಪಕ್ಷಕ್ಕೆ ಆಹ್ವಾನಿಸಲಿ? ಎಂದು ಕೇಳಿದ್ದಾರೆ.

https://pragati.taskdun.com/ramyareactionvidhanasabha-election/

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button