Latest

ಬೇರೆ ಯಾರೇ ಆಗಿದ್ದರೂ ಇಷ್ಟೊಂದು ರಿಸ್ಕ್ ತೆಗೆದುಕೊಳ್ಳುತ್ತಿರಲಿಲ್ಲ; ನಮ್ಮ ಸಿಎಂ ಚಾಣಾಕ್ಯ ವಿದ್ಯೆ ಕಲಿತವರು; ಬೊಮ್ಮಾಯಿ ಹೊಗಳಿದ ಸಚಿವ್ ಆರ್.ಅಶೋಕ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮೀಸಲಾತಿ ಹೆಚ್ಚಳ ವಿಚಾರಕ್ಕೆ ಸಂಬಂಧಿಸಿದಂತೆ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ ಬೆನ್ನಲ್ಲೇ ಸಿಎಂ ಬಸವರಾಜ್ ಬೊಮ್ಮಾಯಿ ನಿರ್ಧಾರವನ್ನು ಹಾಡಿ ಹೊಗಳಿರುವ ಕಂದಾಯ ಸಚಿವ ಆರ್.ಅಶೋಕ್, ಬೇರೆ ಯಾರಾದರೂ ಸಿಎಂ ಆಗಿದ್ದರೆ ಇಷ್ಟೊಂದು ರಿಸ್ಕ್ ತೆಗೆದುಕೊಳ್ಳುತ್ತಿರಲಿಲ್ಲ. ನಮ್ಮ ಸಿಎಂ ಗಂಡೆದೆ ತೋರಿದ್ದಾರೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಆರ್.ಅಶೋಕ್, ನಮ್ಮ ಸಿಎಂ ಚಾಣಾಕ್ಯ ವಿದ್ಯೆ ಕಲಿತವರು. ಚಾಣಾಕ್ಯತನದಿಂದ ಜೇನುಗೂಡಿಗೆ ಕಲ್ಲು ಹೊಡೆದು ಜೇನು ಕೊಟ್ಟಿದ್ದಾರೆ. ಬೇರೆ ಸಿಎಂ ಆಗಿದ್ದರೆ ಇಷ್ಟೊಂದು ರಿಸ್ಕ್ ತೆಗೆದುಕೊಳ್ಳುತ್ತಿರಲಿಲ್ಲ. ಬೊಮ್ಮಾಯಿ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ವಾಲ್ಮಿಕಿ ಸಮುದಾಯ ಆನಂದದಿಂದ ದೀಪಾವಳಿ ಅಚರಿಸಲಿ ಎಂದರು.

ಹಿಂದಿನ ಸರ್ಕಾರಗಳು ಮೀಸಲಾತಿ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನಮಗೆ ಜೇನುಗೂಡಿಗೆ ಕಲ್ಲು ಹೊಡೆದಂತಾಗುತ್ತದೆ ಎಂದಿದ್ದರು. ಆದರೆ ನಾವು ಎಸ್ ಸಿ, ಎಸ್ ಟಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿದ್ದೇವೆ. ಗಂಡೆದೆ ಇರುವವರಿಂದ ಮಾತ್ರ ಇದು ಸಾಧ್ಯ ಎಂದರು. ಅಂತಹ ಗಂಡೆದೆ ತೋರಿಸಿದವರು ನಮ್ಮ ಸಿಎಂ ಬೊಮ್ಮಾಯಿ ಎಂದು ಹಾಡಿ ಹೊಗಳಿದರು.

ಇದೊಂದು ಅಚಾನಕ್ ಘಟನೆ:
ವಸತಿ ಸಚಿವ ವಿ.ಸೋಮಣ್ಣ ಮಹಿಳೆಗೆ ಕಪಾಳಮೋಕ್ಷ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಸಚಿವ ಆರ್.ಅಶೋಕ್, ಸೋಮಣ್ಣ ಒಳ್ಳೆ ಮನಸ್ಸಿನವರು. ಬೇಕಂತ ಹಾಗೆ ಮಾಡಿರಲ್ಲ. ಅವರು ಯಾವತ್ತೂ ಮಹಿಳೆಯರ ಜೊತೆ ಹಾಗೆ ನಡೆದುಕೊಂಡವರಲ್ಲ. ಕ್ಷಮೆಯಾಚನೆ ಮಾಡಿದ್ದಾರೆ. ಇದೊಂದು ಅಚಾನಕ್ ಘಟನೆ ಎಂದು ಹೆಳಿದರು.

Home add -Advt

ಬಸ್ ಓಡಿಸುತ್ತಿದ್ದಾಗಲೇ ಹೃದಯಾಘಾತದಿಂದ ಡ್ರೈವರ್ ಸಾವು; ಪಲ್ಟಿಯಾದ ಬಸ್

https://pragati.taskdun.com/latest/rajahamsabus-driverheart-attackdeath14-injurd/

Related Articles

Back to top button