Latest

ಮತ್ತಷ್ಟು ತೀವ್ರವಾದ ಕೊರೋನಾ: ಶುಕ್ರವಾರ ಒಂದೇ ದಿನ 337 ಜನರಲ್ಲಿ ಸೋಂಕು, 10 ಸಾವು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಮಾರಕ ವೈರಸ್ ಕೊರೋನಾ ದಿನದಿಂದ ದಿನಕ್ಕೆ ರಾಜ್ಯದಲ್ಲಿ ತೀವ್ರಗೊಳ್ಳುತ್ತಿದ್ದು ಶುಕ್ರವಾರ ಒಂದೇ ದಿನ 337 ಜನರಲ್ಲಿ ವ್ಯಾಪಿಸಿಕೊಂಡಿದ್ದು, 10 ಜನರನ್ನು ಬಲಿ ಪಡೆದಿದೆ. ಈ ಮೂಲಕ ಸೋಂಕಿಗೆ ಅಸುನೀಗಿದವರ ಸಂಖ್ಯೆ 120 ಕ್ಕೆ ತಲುಪಿದ್ದು, ಸೋಂಕಿತರ ಸಂಖ್ಯೆ 2943 ಕ್ಕೇರಿದೆ.

ಶುಕ್ರವಾರ ಬೆಂಗಳೂರಿನಲ್ಲಿ ಹೆಚ್ಚಾಗಿದ್ದು ಒಟ್ಟು 138 ಜನ ಸೋಂಕಿತರಾಗಿದ್ದು, ಕಲಬುರಗಿಯಲ್ಲಿ 52, ಬಳ್ಳಾರಿ 32, ಹಾಸನ 18, ಮಂಗಳೂರು 13, ಉಡುಪಿ 11, ಬೀದರ್ 10, ಮೈಸೂರು 6 ಜನ ಸೋಂಕಿಗೊಳಗಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಒಂದು ಪ್ರಕರಣ ಕಂಡು ಬಂದಿದೆ.

ಇಂದು 230 ಜನ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, 78 ಸೋಂಕಿತರು ಐಸಿಯು ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದಿನ ಸೋಂಕಿತರಲ್ಲಿ 11ಜನ ವಿದೇಶದಿಂದ ಬಂದವರಾಗಿದ್ದು, 93 ಜನ ಇತರ ರಾಜ್ಯಗಳಿಂದ ಆಗಮಿಸಿದ್ದಾರೆ. ಇವರೆಲ್ಲರನ್ನು ಆಯಾ ಜಿಲ್ಲೆಗಳ ಕೋವಿಡ್ ವಾರ್ಡ್ ಗಳಲ್ಲಿ ಅಡ್ಮಿಟ್ ಮಾಡಲಾಗಿದೆ.

Home add -Advt

 

 

Related Articles

Back to top button