ಪ್ರಗತಿ ವಾಹಿನಿ ಸುದ್ದಿ ಮುಂಬೈ –
ಭಾನುವಾರ ನಡೆದ ರಾಜಸ್ಥಾನ ರಾಯಲ್ಸ್ ಮತ್ತು ಲಕ್ನೋ ಸುಪರ್ ಜಾಯಿಂಟ್ಸ್ ನಡುವಿನ ಪಂದ್ಯದಲ್ಲಿ ಆರ್‌ಆರ್ ತಂಡದ ಬ್ಯಾಟ್ಸ್‌ಮನ್ ಆರ್. ಅಶ್ವಿನ್ ಸ್ವೈ ಔಟ್ ಘೋಷಿಸಿಕೊಂಡು ಹೊರನಡೆದ ಕಾರಣವನ್ನು ಬಹಿರಂಗಪಡಿಸಿದ್ದಾರೆ.
ಕ್ರಿಕೇಟ್ ಕೂಡ ಫುಟ್‌ಬಾಲ್‌ನಂತೆ ಒಂದು ತಂಡದ ಆಟ, ಆದರೆ ಆಟಗಾರರೂ ಸೇರಿದಂತೆ ಹೆಚ್ಚಿನವರು ಈ ಸಂಗತಿಯನ್ನು ಮರೆತುಬಿಡುತ್ತೇವೆ. ವಯುಕ್ತಿಕ ದಾಖಲೆಗಳು, ಸ್ಕೋರ್‌ಗಳಿಗಿಂತ ತಂಡದ ಗೆಲವು ಮುಖ್ಯ ಹಾಗಾಗಿ ಕೊನೇಯ ಓವರ್‌ನಲ್ಲಿ ನಾನು ರಿಟಾಯರ್ ಔಟ್ ಘೋಷಿಸಿಕೊಂಡೆ ಎಂದು ಆರ್. ಅಶ್ವಿನ್ ತಿಳಿಸಿದ್ದಾರೆ.
ಅಶ್ವಿನ್ ಅವರ ಈ ನಿರ್ಧಾರ ಅತ್ಯಂತ ಸೂಕ್ತವಾಗಿತ್ತು ಎಂಬುದು ಪಂದ್ಯದ ಫಲಿತಾಂಶದಿಂದ ಸಾಬೀತಾಗಿದೆ. ಅಶ್ವಿನ್ ೧೯ನೇ ಓವರ್‌ನಲ್ಲಿ ರಿಟಾಯರ್ ಔಟ್ ಘೋಷಿಸಿಕೊಂಡು ಹೊರನಡೆದರು. ಈ ವೇಳೆ ಅವರು ೨೩ ಬಾಲ್‌ಗಳಿಗೆ ೧೮ ರನ್ ಬಾರಿಸಿದ್ದರು. ನಂತರ ಬಂದ ರಿಯಾನ್ ಪರಾಗ್ ೪ ಬಾಲ್‌ಗಳಲ್ಲಿ ೮ ರನ್ ಸಿಡಿಸಿದರು. ತಂಡದ ಮೊತ್ತ ೧೬೫ಕ್ಕೆ ಏರಲು ಕಾರಣವಾಯಿತು. ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಲಕ್ನೋ ಸೂಪರ್ ಜಾಯಿಂಟ್ಸ್ ವಿರುದ್ಧ ೩ ರನ್‌ಗಳ ಗೆಲುವು ಸಾಧಿಸಿತು.
ಸ್ವತಃ ಔಟ್ ಘೋಷಿಸಿಕೊಂಡು ಹೊರನಡೆದ ಆರ್. ಅಶ್ವಿನ್: ಐಪಿಎಲ್‌ನಲ್ಲೊಂದು ಅಚ್ಚರಿಯ ವಿದ್ಯಮಾನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ