Latest

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಇನ್ನಿಲ್ಲ

ಪ್ರಗತಿವಾಹಿನಿ ಸುದ್ದಿ; ಮೈಸೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ತೀವ್ರ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಅವರಿಗೆ 61 ವರ್ಷ ವಯಸ್ಸಾಗಿತ್ತು.

ಧ್ರುವನಾರಾಯಣ ಅವರಿಗೆ ಇದ್ದಕ್ಕಿದ್ದಂತೆ ರಕ್ತವಾಂತಿ ಆರಂಭವಾಗಿತ್ತು. ತಕ್ಷಣ ಅವರನ್ನು ಕೊಳ್ಳೆಗಾಲ ಬಳಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಕೋಮಾಸ್ಥಿತಿ ತಲುಪಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತೀವ್ರ ರಕ್ತಸ್ರಾವದಿಂದ ಅವರು ಮೃತಪಟ್ಟಿದ್ದಾರೆ ಎಂದು ಡಾ.ಮಂಜುನಾಥ್ ತಿಳಿಸಿದ್ದಾರೆ.

ಕುಟುಂಬದವರು ಹೇಳುವ ಪ್ರಕಾರ ಧ್ರುವನಾರಾಯಣ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಆದರೆ ಏಕಾಏಕಿ ಅವರು ಮೃತಪಟ್ಟಿರುವುದು ಆಘಾತವನ್ನುಂಟುಮಾಡಿದೆ.

1983ರಲ್ಲಿ ಕಾಂಗ್ರೆಸ್ ಸೇರುವ ಮೂಲಕ ರಾಜಕೀಯ ಜೀವನ ಆರಂಭಿಸಿದ್ದರು ಎರಡು ಬಾರಿ ಸಂಸದರಾಗಿ ಕೊಳ್ಳೆಗಾಲ ಕ್ಷೇತ್ರದಿಂದ 1 ಬಾರಿ ಹಾಗೂ ಸಂತೇಮಾರನಹಳ್ಳಿ ಕ್ಷೇತ್ರದಿಂದ ಬಾರಿ ಆಯ್ಕೆಯಾಗಿದ್ದರು. ಧ್ರುವನಾರಾಯಣ ನಿಧನಕ್ಕೆ ರಾಜಕೀಯ ಗಣ್ಯರು ಕಂಬನಿ ಮಿಡಿದಿದ್ದಾರೆ.

Home add -Advt

Related Articles

Back to top button