
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಖ್ಯಾತ ರೇಡಿಯೋ ಜಾಕಿ ರಚನಾ(39) ತೀವ್ರ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ಜೆ.ಪಿನಗರದಲ್ಲಿ ನಡೆದಿದೆ.
ತಮ್ಮ ಕಂಚಿನ ಕಂಠದಿಂದಲೇ ಜನಪ್ರಿಯರಾಗಿದ್ದ ಆರ್.ಜೆ.ರಚನಾ, ಕಾರ್ಡಿಯಾಕ್ ಅರೆಸ್ಟ್ ಆಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಜೆ.ಪಿ.ನಗರದ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದ ರಚನಾ ರೇಡಿಯೋ ಸಿಟಿ, ರೆಡಿಯೋ ಮಿರ್ಚಿ ಸೇರಿದಂತೆ ಎಫ್.ಎಂನಲ್ಲಿ ಆರ್.ಜೆ.ಆಗಿ ಕಾರ್ಯನಿರ್ವಹಿಸಿದ್ದರು.
ಕಳೆದ 7 ವರ್ಷಗಳ ಹಿಂದೆ ರೇಡಿಯೋ ಜಾಕಿ ವೃತ್ತಿಯನ್ನು ತೊರೆದಿದ್ದ ರಚನಾ, ಸಿಂಪಲ್ ಆಗಿ ಒಂದು ಲವ್ ಸ್ಟೋರಿ ಸೇರಿದಂತೆ ಕೆಲ ಚಿತ್ರಗಳಲ್ಲೂ ಅಭಿನಯಿಸಿದ್ದರು.
ಆರ್.ಜೆ ರಚನಾ ಹೃದಯಾಘಾತದಿಂದ ಮೃತಪಟ್ಟಿರುವ ಬೆನ್ನಲ್ಲೇ ಅವರ ಕುಟುಂಬ ರಚನಾ ಅಂಗಾಂಗ ದಾನ ಮಾಡಲು ನಿರ್ಧರಿಸಿದೆ. ಈ ಮೂಲಕ ಸಾವಿನಲ್ಲೂ ರಚನಾ ಕುಟುಂಬ ಸಾರ್ಥಕತೆ ಮೆರೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ