Kannada NewsLatest

ಆರ್.ಎನ್‌.ನಾಯಕ ಪ್ರಕರಣ: ಸಾಹಸಿ ಪೊಲೀಸ್ ಸಿಬ್ಬಂದಿ ಮರೆತ ಸರ್ಕಾರ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: 2014ರಲ್ಲಿ ನಡೆದಿದ್ದ ಅಂಕೋಲಾದ ಉದ್ಯಮಿ ಆರ್.ಎನ್.ನಾಯಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಕೋಕಾ ನ್ಯಾಯಾಲಯ ತೀರ್ಪು ಪ್ರಕಟಿಸುವ ಮೂಲಕ ಈ ಪ್ರಕರಣಕ್ಕೆ ಒಂದು ಹಂತದ ಇತ್ಯರ್ಥ ದೊರೆತಂತಾಗಿದೆ. ಆದರೆ ನಡುಬೀದಿಯಲ್ಲಿ ಆರ್.ಎನ್.ನಾಯಕರನ್ನು ಶೂಟೌಟ್ ಮಾಡಲು ಹಂತಕರು ಸುತ್ತುವರೆದು ನಿಂತಿದ್ದಾಗ ಧೈರ್ಯಗುಂದದೆ ಹಂತಕರ ಮೇಲೆ ಗುಂಡು ಹಾರಿಸಿ ಒಬ್ಬನನ್ನು ಎನ್ ಕೌಂಟರ್ ಮಾಡಿದ ಪೊಲೀಸ್ ಕಾನಸ್ಟೆಬಲ್ ರಮೇಶ ಗೌಡ ಅವರಿಗೆ ಸರಕಾರ ಘೋಷಿಸಿದ ಬಹುಮಾನವನ್ನು ಈವರೆಗೂ ನೀಡಿಲ್ಲ ಎಂದು ಜನಶಕ್ತಿ ವೇದಿಕೆಯ ಮಾಧವ ನಾಯ್ಕ ಆರೋಪಿಸಿದ್ದಾರೆ.

ಹತ್ಯೆ ಘಟನೆಗೆ ಸಂಬಂಧಿಸಿ 9 ಜನರಿಗೆ ಶಿಕ್ಷೆ ವಿಧಿಸಿರುವ ಸಂದರ್ಭದಲ್ಲಿ ಅಂದು ಜೀವದ ಹಂಗು ತೊರೆದು ರಕ್ಷಣೆಗೆ ಮುಂದಾಗಿದ್ದ ಪೊಲೀಸ್ ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಕೂಡ ನೆನೆಯುವುದು ಸಮಾಜದ ಕರ್ತವ್ಯ.

ನೆನಪಿದ್ದಂತೆ 7.04. 2015 ರಲ್ಲಿ ಪೊಲೀಸ್ ಇಲಾಖೆ ಘೋಷಿಸಿದ್ದ ಒಂದು ಲಕ್ಷ ರೂಪಾಯಿ ಬಹುಮಾನ ಈ ಸಿಬ್ಬಂದಿಗೆ ಇದುವರೆಗೂ ಘೋಷಣೆಯಾಗೇ ಉಳಿದುಕೊಂಡಿದೆ.

ಮುಖ್ಯಮಂತ್ರಿ ಪದಕ, ಹಿಂದೆ ಪೊಲೀಸ್ ಮಹಾನಿರ್ದೇಶಕರಾಗಿದ್ದ ನೀಲಮಣಿ ರಾಜು ನೀಡಿದ 20,000 ರೂಪಾಯಿ ನಗದು ಬಹುಮಾನ ಬಿಟ್ಟರೆ ಇಲಾಖೆಯಾಗಲಿ, ಸರಕಾರವಾಗಲಿ ಸಾಹಸಿವಂತ ರಮೇಶ ಗೌಡರಿಗೆ ಸಹಾಯಹಸ್ತ ಚಾಚಿಲ್ಲ. ಇಂತಹ ಘಟನೆಗಳು ನಡೆದಾಗ ಎದೆಗುಂದದೆ ತನ್ನ ಕರ್ತವ್ಯ ನಿಭಾಯಿಸುವುದು ಸುಲಭದ ಮಾತಲ್ಲ. ಆದರೂ ಪ್ರಾಣ ಪಣಕ್ಕಿಟ್ಟು ಅಂದು ಶತಾಯಗತಾಯ ಆರ್.ಎನ್.ನಾಯಕ ಉಳಿಸಲು ಪೊಲೀಸ್ ಇಲಾಖೆಯ ರಕ್ಷಣೆಯೇ ಧ್ಯೇಯ ಎಂಬುದನ್ನು ಪಾಲಿಸಿದ್ದ ರಮೇಶ್ ಅವರಿಗೆ ಇಲಾಖೆ ಸೂಕ್ತ ಬಹುಮಾನ ನೀಡಿದ್ದರೆ ಆರ್.ಎನ್.ನಾಯಕರ ಆತ್ಮಶಾಂತಿಗೂ ಕಾರಣವಾಗುತ್ತಿತ್ತೇನೊ ಎಂಬ ಅಭಿಪ್ರಾಯ ಮೂಡುತ್ತದೆ ಎಂದು ಮಾಧವ ನಾಯಕ ಅಭಿಪ್ರಾಯಪಟ್ಟಿದ್ದಾರೆ.

ಉದ್ಯಮಿ ಆರ್.ಎನ್.ನಾಯಕ್ ಹತ್ಯೆ: ಬನ್ನಂಜೆ ರಾಜಾ ಸೇರಿ 9 ಜನ ಅಪರಾಧಿಗಳು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button