Latest

ಆರ್.ವಿ.ದೇಶಪಾಂಡೆ ಬೆಂಗಾವಲು ವಾಹನ ಪಲ್ಟಿ; ಇಬ್ಬರಿಗೆ ಗಾಯ

 

ಪ್ರಗತಿವಾಹಿನಿ ಸುದ್ದಿ, ಕಾರವಾರ
 ಸಚಿವ‌ ಆರ್. ವಿ. ದೇಶಪಾಂಡೆ ಅವರ ಬೆಂಗಾವಲು ಪೊಲೀಸ್ ವಾಹನ ಕೆಳಗೆ ಉರುಳಿ ವಾಹನದಲ್ಲಿದ್ದ ಇಬ್ಬರು ಪೊಲೀಸರು ತೀವ್ರಗಾಯಗೊಂಡಿರುವ ಘಟನೆ ಉತ್ತರ‌ ಕನ್ನಡ ಜಿಲ್ಲೆಯ  ಕದ್ರಾದ ಅಣಶಿ ಘಟ್ಟದಲ್ಲಿ ನಡೆದಿದೆ.
ಕಂದಾಯ ಸಚಿವ ಆರ್. ವಿ. ದೇಶಪಾಂಡೆ ಕಾರವಾರದಲ್ಲಿ ಕೆಡಿಪಿ ಸಭೆ ನಡೆಸಲು ಹಳಿಯಾಳದಿಂದ ಜೊಯಿಡಾ-ಅಣಶಿ ಮಾರ್ಗವಾಗಿ‌ ಆಗಮಿಸುತ್ತಿದ್ದರು.
ಬೆಂಗಾವಲು ಪೊಲೀಸ್ ವಾಹನ ಅಣಶಿಯ ಘಟ್ಟದಲ್ಲಿ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಉರುಳಿ‌ ಕೆಳಭಾಗದ ರಸ್ತೆಗೆ ಬಿದ್ದಿದೆ.
ಘಟನೆಯಲ್ಲಿ ಚಾಲಕ ರಾಜೇಶ, ಪೊಲೀಸ್ ಸಿಬ್ಬಂದಿ  ಗಾಯಗೊಂಡಿದ್ದಾರೆ.
ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.ಈ ಸಂಬಂಧ ಕದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button