Karnataka News

ಮಾರಕ ಕಾಯಿಲೆ ರೇಬಿಸ್ 2030ರೊಳಗೆ ನಿರ್ಮೂಲನೆ ?

ಪ್ರಗತಿ ವಾಹಿನಿ ಸುದ್ದಿ, ಬೆಂಗಳೂರು:
ಅತ್ಯಂತ ಹಳೆಯ ಕಾಯಿಲೆಗಳಲ್ಲಿ ಒಂದಾಗಿರುವ ಮಾರಕ ರೇಬಿಸ್ ಅನ್ನು ಅಧಿಸೂಚಿತ ಕಾಯಿಲೆ ಎಂದು ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದೆ.

ರೇಬಿಸ್ ವೈರಾಣು ಸೋಂಕು ಇರುವ ನಾಯಿಗಳ ಕಡಿತದಿಂದ ಮನುಷ್ಯನಿಗೆ ಈ ಕಾಯಿಲೆ ಹರಡುತ್ತದೆ. ರೇಬಿಸ್‍ಗೆ ನಿಗದಿತ ವೇಳೆಯೊಳಗೆ ಚುಚ್ಚು ಮದ್ದು ಮತ್ತು ಚಿಕಿತ್ಸೆ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಈ ಕಾಯಿಲೆ ಜೀವಕ್ಕೆ ಎರವಾಗುವ ಅಪಾಯವಿರುತ್ತದೆ.

ಮನುಷ್ಯನಿಗಷ್ಟೇ ಅಲ್ಲದೇ ದನ ಮೊದಲಾಗಿ ಸಾಕು ಪ್ರಾಣಿಗಳೂ ರೇಬಿಸ್ ರೋಗಕ್ಕೆ ತುತ್ತಾಗುತ್ತವೆ.
ರೇಬಿಸ್ ಅತ್ಯಂತ ಯಾತನಾದಾಯಕ ಕಾಯಿಲೆಯಾಗಿದ್ದು ಈ ಕಾಯಿಲೆಯಿಂದ ಮರಣ ಹೊಂದುವವರ ಪ್ರಮಾಣವೂ ಹೆಚ್ಚುತ್ತಿದೆ.

2030ರೊಳಗೆ ರೇಬಿಸ್ ಅನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಗುರಿಯೊಂದಿಗೆ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಅಧಿಸೂಚಿತ ಕಾಯಿಲೆ ಎಂದು ಗುರುತಿಸಲಾಗಿದೆ.

ಈ ಕ್ರಮದಿಂದ ರೇಬಿಸ್ ಪ್ರಕರಣಗಳ ವರದಿ ಮತ್ತು ಕಣ್ಗಾವಲು ವ್ಯವಸ್ಥೆ ಬಲಗೊಳ್ಳಲಿದ್ದು 2030ರ ಒಳಗೆ ರೇಬಿಸ್ ಕಾಯಿಲೆ ನಿರ್ಮೂಲನೆಯಾಗಲಿದೆ ಎಂಬ ವಿಶ್ವಾಸ ಸರಕಾರದ್ದಾಗಿದೆ.

ಫೆಬ್ರವರಿಯಲ್ಲಿ ಏರ್ ಶೋ: ಪ್ರಧಾನಿ ಮೋದಿಯವರಿಂದ ಉದ್ಘಾಟನೆ

https://pragati.taskdun.com/air-showprime-minister-modicollins-aerospace-global-engineering-and-technology-centerinaugurationcm-basavaraj-bommai/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button