Film & EntertainmentKannada NewsKarnataka NewsLatest

*ನಿರ್ಮಾಪಕರಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ರಾಧಿಕಾ ಕುಮಾರಸ್ವಾಮಿ ಸಹೋದರ*

ಹಾರರ್ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ರಾಧಿಕಾ ಕುಮಾರಸ್ವಾಮಿ ಸಹೋದರ ರವಿರಾಜ್ ಎಂಟ್ರಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ನಟನೆ ಜೊತೆಗೆ ನಿರ್ಮಾಣದಲ್ಲೂ ಗುರುತಿಸಿಕೊಂಡಿದ್ದಾರೆ. ತಮ್ಮ ಶಮಿಕಾ ಎಂಟರ್ ಪ್ರೈಸಸ್ ಮೂಲಕ ರಾಧಿಕಾ ಮೂರು ಸಿನಿಮಾಗನ್ನು ನಿರ್ಮಾಣ ಮಾಡಿದ್ದಾರೆ. ಇದೀಗ ಅವರ ಸಹೋದರ ರವಿರಾಜ್ ಚಂದನವನಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ನಟನಾಗಿ ಅಲ್ಲ ನಿರ್ಮಾಪಕನಾಗಿ. ರವಿರಾಜ್ ಅವರಿಗೆ ಸಿನಿಮಾರಂಗ ಹೊಸದೇನಲ್ಲ. ತನ್ನ ಸಹೋದರಿ ರಾಧಿಕಾ ಅವರ ಶಮಿಕಾ ಎಂಟರ್ ಪ್ರೈಸಸ್ ನಲ್ಲಿ ಸಹ ನಿರ್ಮಾಪಕನಾಗಿ ಕೆಲಸ ಮಾಡಿರುವ ಅನುಭವ ರವಿರಾಜ್ ಅವರಿಗಿದೆ. ‘ಲಕ್ಕಿ’, ‘ಸ್ವೀಟಿ ನನ್ನ ಜೋಡಿ’, ಭೈರಾದೇವಿ ಸಿನಿಮಾಗಳಲ್ಲಿ ರವಿರಾಜ್ ತಂಗಿ ರಾಧಿಕಾ ಜೊತೆ ಕೆಲಸ ಮಾಡಿದ್ದರು ಜೊತೆಗೆ ಸಿನಿಮಾ ವಿತರಣೆ ವಿಭಾಗದಲ್ಲೂ ಕೆಲಸ ಮಾಡಿದ್ದಾರೆ. ಆದರೀಗ ಸ್ವತಂತ್ರ ನಿರ್ಮಾಪಕರಾಗಿ ಚಂದನವನಕ್ಕೆ ಪದಾರ್ಪಣೆ ಮಾಡತ್ತಿದ್ದಾರೆ ರವಿರಾಜ್.

ತಮ್ಮದೇ ಆದ ಹೊಸ ನಿರ್ಮಾಣ ಸಂಸ್ಥೆ ಹುಟ್ಟುಹಾಕಿದ್ದು ಈಗಾಗಲೇ ಮೊದಲ ಸಿನಿಮಾದ ಚಿತ್ರೀಕರಣ ಕೂಡ ಮುಗಿಸಿದ್ದಾರೆ. ರವಿರಾಜ್ ತಮ್ಮ ನಿರ್ಮಾಣ ಸಂಸ್ಥೆಗೆ ‘ಶ್ರೀ ದುರ್ಗಾಪರಮೇಶ್ವರಿ ಪ್ರೊಡಕ್ಷನ್’ ಎಂದು ಹೆಸರಿಟ್ಟಿದ್ದಾರೆ. ಅಂದಹಾಗೆ ಇದು ರವಿರಾಜ್ ಅವರ ತಂದೆಯ ಕನಸಿನ ಬ್ಯಾನರ್. ಅಪ್ಪನ ಕನಸನ್ನು ‘ಶ್ರೀ ದುರ್ಗಾಪರಮೇಶ್ವರಿ’ ಬ್ಯಾನರ್ ಮೂಲಕ ನನಸು ಮಾಡಿದ್ದಾರೆ ರವಿರಾಜ್. ತಮ್ಮ ಬ್ಯಾನರ್‌ನ ಮೊದಲ ಸಿನಿಮಾವಾಗಿ ಹಾರರ್ ಚಿತ್ರ ತಯಾರಾಗಿದ್ದು ರಿಲೀಸ್‌ಗೆ ರೆಡಿಯಾಗಿದೆ. ಇದುವರೆಗೂ ನೋಡಿರದ ಹಾರರ್ ಸಬ್ಜೆಕ್ಟ್ ಮೂಲಕ ಅಭಿಮಾನಿಗಳನ್ನು ಭಯ ಬೀಳಿಸಲು ಸಜ್ಜಾಗಿದ್ದಾರೆ ರವಿರಾಜ್ ಮತ್ತು ತಂಡ.

ಅಂದಹಾಗೆ ರವಿರಾಜ್ ಅವರ ಚೊಚ್ಚಲ ನಿರ್ಮಾಣದ ಸಿನಿಮಾದಲ್ಲಿ ದೊಡ್ಡ ದೊಡ್ಡ ಸ್ಟಾರ್ಸ್ ನಟಿಸಿದ್ದಾರೆ. ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಈ ಹಾರರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಯಾರೆಲ್ಲ ನಟಿಸಿದ್ದಾರೆ, ನಿರ್ದೇಶಕ ಯಾರು ಎನ್ನುವುದನ್ನು ಸೀಕ್ರೆಟ್ ಆಗಿಯೇ ಇಟ್ಟಿದ್ದಾರೆ ನಿರ್ಮಾಪಕ ರವಿರಾಜ್. ಹಾರರ್ ಸಿನಿಮಾ ಎಂದು ಸಾಕಷ್ಟು ಕುತೂಹಲ ಮೂಡಿಸಿರುವ ರವಿರಾಜ್ ಸದ್ಯದಲ್ಲೇ ಅಭಿಮಾನಿಗಳ ಮುಂದೆ ಬರಲಿದ್ದಾರೆ.

ಶ್ರೀ ದುರ್ಗಾಪರಮೇಶ್ವರಿ ಬ್ಯಾನರ್ ಮೂಲಕ ಉತ್ತಮ ಸಿನಿಮಾಗಳನ್ನು ಮಾಡುವ ಆಸೆ ಇಟ್ಟುಕೊಂಡಿದ್ದಾರೆ. ವರ್ಷಕ್ಕೆ ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಬೇಕು ಎನ್ನುವುದು ಅವರ ಕನಸು. ಸದ್ಯ ಹಾರರ್ ಸಿನಿಮಾ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಸಹೋದರಿ ರಾಧಿಕಾ ಈಗಾಗಲೇ ಸಿನಿಮಾರಂಗದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ತಂಗಿಯ ಹಾಗೆ ಅಣ್ಣ ಕೂಡ ದೊಡ್ಡ ಮಟ್ಟದ ಖ್ಯಾತಿಗಳಿಸಲಿ ಎನ್ನುವುದು ಎಲ್ಲರ ಆಶಯ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button