ಪ್ರಗತಿವಾಹಿನಿ ಸುದ್ದಿ; ಉಡುಪಿ: ಎಲ್ಲಾ ಮಸೀದಿಗಳಲ್ಲಿ ಶಿವಲಿಂಗ ಹುಡಕಬೇಡಿ ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ನೀಡಿರುವ ಹೇಳಿಕೆಯಲ್ಲಿ ಸೌಹಾರ್ದತೆ ಮೂಡಿಸುವ ಮಾತಿದೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಮಾತನಾಡಿರುವ ರಘುಪತಿ ಭಟ್, ಎಲ್ಲಾ ಮಸೀದಿಗಳನ್ನು ಹುಡುಕಲು ಹೋಗಬೇಡಿ ಎಂದು ಮೋಹನ್ ಭಾಗವತ್ ಹೇಳಿರ್ವುದರ ಅರ್ಥ ಈಗ ಇರುವುದನ್ನು ಸರಿಪಡಿಸಿಕೊಳ್ಳೋಣ ಎಂಬುದು ಎಂದು ಹೇಳಿದ್ದಾರೆ.
ಕೆಲವು ಕುರುಹುಗಳು ಸಿಕ್ಕಾಗ ಭಾವನೆಗಳಿಗೆ ಧಕ್ಕೆಯಾಗುತ್ತದೆ, ನಮ್ಮ ಮೂಲ ಸ್ಥಾನಕ್ಕಾಗಿ ಹುಡುಕಿಕೊಂಡು ಹೋಗಿ ಜೀರ್ಣೋದ್ಧಾರ ಮಾಡುತ್ತೇವೆ. ಸೌಹಾರ್ದತೆ ಇರಬೇಕು ಎಂದು ಆರ್ ಎಸ್ ಎಸ್ ಮುಖ್ಯಸ್ಥರು ಕರೆ ನೀಡಿದ್ದಾರೆ ಎಂದರು.
ಜನರು ಭಾವನಾತ್ಮಕವಾಗಿ ಹೋರಾಡುತ್ತಿದ್ದಾರೆ. ಕೆಲ ಸಾಕ್ಷಿಗಳು ಸಿಕ್ಕಾಗ ಇಂತಹ ಹೋರಾಟ ಆಗುತ್ತದೆ. ಆದರೆ ಎಲ್ಲಾ ಮಸೀದಿಗಳಲ್ಲಿ ದೇವರನ್ನು ಹುಡುಕಲು ಹೋಗುವುದು ಬೇಡ. ಎಲ್ಲರೂ ಸೌಹಾರ್ದದಿಂದ ಇರೋಣ ಎಂದು ತಿಳಿಸಿದರು.
ಇದೇ ವೇಳೆ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಕಿಡಿ ಕಾರಿರುವ ರಘುಪತಿ ಭಟ್, ಆರ್ ಎಸ್ ಎಸ್ ಚಡ್ಡಿ ಸಂಸ್ಕೃತಿ ಬಿಟ್ಟು ಪ್ಯಾಂಟ್ ಗೆ ಬಂದು ಬಹಳ ಕಾಲವಾಯಿತು. ಈಗ ನಮ್ಮ ಗಣವೇಷ ಅಂಗಿ-ಪ್ಯಾಂಟ್ ಆಗಿದೆ. ರಾಜಕೀಯ ಉದ್ದೇಶದಿಂದ ಸಿದ್ದರಾಮಯ್ಯ ಹೇಳಿಕೆ ನೀಡುತ್ತಿದ್ದಾರೆ ಅಷ್ಟೇ. ಸಿದ್ದರಾಮಯ್ಯನವರಿಗೆ ಆರ್ ಎಸ್ ಎಸ್ ಬಗ್ಗೆ ಏನು ಗೊತ್ತು? ಆರ್ ಎಸ್ ಎಸ್ ನ ಆ ಚಡ್ಡಿ ಇದ್ದಿದ್ದರಿಂದಲೇ ದೇಶದಲ್ಲಿ ಒಳ್ಳೆ ವಾತಾವರಣವಿದೆ. ಆರ್ ಎಸ್ ಎಸ್ ಇಲ್ಲದಿದ್ದರೆ ದೇಶದ ಪರಿಸ್ಥಿತಿ ಊಹಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಓರ್ವ ಹುಚ್ಚ; ಮಾಜಿ ಸಿಎಂ ವಿರುದ್ಧ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ ಕೆ.ಎಸ್.ಈಶ್ವರಪ್ಪ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ