
ಪ್ರಗತಿವಾಹಿನಿ ಸುದ್ದಿ: ನಟಿ ರಾಗಿಣಿ ದ್ವಿವೇದಿ ಜೊತೆ ಅಭಿಮಾನಿ ಅನುಚಿತವಾಗಿ ವರ್ತಿಸಿದ್ದು, ನಟಿ ಅಭಿಮಾನಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ.
ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ನಟಿ ರಾಗಿಣಿ ದ್ವಿವೇದಿ ನೋಡಲೆಂದು ಅಭಿಮಾನಿಗಳು ವೇದಿಕೆಯತ್ತ ಮುನ್ನುಗ್ಗಿದ್ದಾರೆ. ಅಭಿಮನಿಗಳು ಕೈಕುಲುಕಿ ರಾಗಿಣಿಗೆ ಶುಭಕೋರಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬ ರಗಿಣಿ ಕೈ ಹಿಡಿದು ಎಳೆದಿದ್ದನೆ.
ಹಲವು ಅಭಿಮಾನಿಗಳು ನೆಚ್ಚಿನ ನಟಿಯೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದರು. ಎಲ್ಲರೊಂದಿಗೂ ನಟಿ ರಾಗಿಣಿ ಸಮಾಧಾನವಾಗಿಯೇ ಫೋಟೋಗೆ ಪೋಸ್ ನೀಡುತ್ತಿದ್ದರು. ಈ ವೇಳೆ ನೂರಾರು ಅಭಿಮಾನಿಗಳು ನಟಿಯತ್ತ ಮುನ್ನುಗ್ಗಿ, ಕೈ ಕುಲುಕಿ ವಿಶ್ ಮಾಡಿದ್ದಾರೆ. ಇದೇ ವೇಳೆ ಅಭಿಮಾನಿಯೊಬ್ಬ ರಾಗಿಣಿ ಕೈ ಹಿಡಿದು ಎಳೆದಿದ್ದಾನೆ. ಇದರಿಂದ ವಿಚಲಿತರಾದ ರಾಗಿಣಿ ಕೋಪಗೊಂಡು ಅಭಿಮಾನಿ ಕೆನ್ನೆಗೆ ಬಾರಿಸಿದ್ದಾರೆ. ಅಲ್ಲದೇ ವೇದಿಕೆಯಿಂದ ತೆರಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ