LatestNationalPolitics

*ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ*

ಪ್ರಗತಿವಾಹಿನಿ ಸುದ್ದಿ, ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಆಯ್ಕೆಯಾಗಿದ್ದಾರೆ.

ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ರಾಹುಲ್ ಗಾಂಧಿಯವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮೊದಲಾದವರು ಅಭಿನಂದಿಸಿದ್ದಾರೆ.

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ನಮ್ಮೆಲ್ಲರ ನೆಚ್ಚಿನ ನಾಯಕ @RahulGandhi ಅವರಿಗೆ ಅಭಿನಂದನೆಗಳು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸೇಡಿನ ರಾಜಕಾರಣ ಮತ್ತು ನಿರಂತರವಾದ ವೈಯಕ್ತಿಕ ಚಾರಿತ್ರ್ಯಹನನವನ್ನು ಎದುರಿಸುತ್ತಲೇ ತನ್ನ ದಣಿವರಿಯದ ಹೋರಾಟದ ಮೂಲಕ ಸರ್ವಾಧಿಕಾರಿ ಆಡಳಿತದಿಂದ ದೇಶವನ್ನು ರಕ್ಷಿಸಿದ ರಾಹುಲ್ ಗಾಂಧಿಯವರು ಸಾಧನೆಯ ಮೂಲಕ ಈ ಪದವಿಯನ್ನು ಗಳಿಸಿದ್ದಾರೆ.

Home add -Advt

ಸೈದ್ಧಾಂತಿಕ ಬದ್ಧತೆ, ದೂರದರ್ಶಿತ್ವ ಮತ್ತು ಜನಪರ ಕಾಳಜಿಯ ರಾಹುಲ್ ಗಾಂಧಿಯವರು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಆಡಳಿತ ಪಕ್ಷಕ್ಕೆ ಸಿಂಹ ಸ್ವಪ್ನರಾಗಲಿದ್ದಾರೆ ಎಂದಿದ್ದಾರೆ.

Related Articles

Back to top button