ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬೀದಿಗಿಳಿದರೆಂದರೆ ಏನಾದರೊಂದು ಚಮತ್ಕಾರ ಇದ್ದೇ ಇರುತ್ತದೆ. ಇದೀಗ ಅವರು ತಮ್ಮ ಸಾರ್ವಜನಿಕ ಸಂಪರ್ಕ ಉಪಕ್ರಮದ ಭಾಗವಾಗಿ ದೆಹಲಿಯ ಕರೋಲ್ ಬಾಗ್ ಮಾರುಕಟ್ಟೆಯಲ್ಲಿರುವ ಬೈಕ್ ರಿಪೇರಿ ಅಂಗಡಿಗೆ ಭೇಟಿ ನೀಡಿದರು.
ಮಾರುಕಟ್ಟೆಯಲ್ಲಿ ಸ್ಥಳೀಯ ಉದ್ಯಮಿಗಳು ಮತ್ತು ಕಾರ್ಮಿಕರೊಂದಿಗೆ ಸಂವಾದ ನಡೆಸಿದರು. ಮತ್ತು ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮೆಕ್ಯಾನಿಕ್‌ಗಳೊಂದಿಗೆ ಮಾತನಾಡಿದರು.
ಇದೇ ವೇಳೆಯಲ್ಲಿ ರಾಹುಲ್ ಅವರು ಗ್ಯಾರೇಜ್ ಒಂದರಲ್ಲಿ ಬೈಕ್ ರಿಪೇರಿಗೂ ಇಳಿದರು. ನಟ್, ಬೋಲ್ಟ್ ಗಳನ್ನೆಲ್ಲ ಹೇಗೆ ತಿರುಗಿಸಬೇಕು, ಟೂಲ್ ಗಳನ್ನು ಹೇಗೆ ಬಳಸಬೇಕು ಎಂಬುದರ ಬಗ್ಗೆ ಗ್ಯಾರೇಜ್ ಮಾಲೀಕರಿಂದ ಮಾಹಿತಿ ಪಡೆದು ತಾವೇ ಆ ಕೆಲಸ ಮಾಡಿದರು.
ಈ ಫೋಟೊಗಳನ್ನು ರಾಹುಲ್ ಗಾಂಧಿ ಅವರ Facebook ನಲ್ಲಿ ಹಂಚಿಕೊಂಡಿದ್ದು “Learning from the hands that turn the wrenches, and keep the wheels of Bharat moving.” ಎಂದು ಟ್ಯಾಗ್ ಲೈನ್ ಕೂಡ ಬರೆದಿದ್ದಾರೆ. ಇದೀಗ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ