Latest

ರಾಷ್ಟ್ರಪತಿ ಭಾಷಣದ ವೇಳೆ ಮೊಬೈಲ್ ನಲ್ಲಿ ಮುಳುಗಿದ್ದ ರಾಹುಲ್ ಗಾಂಧಿ

ಪ್ರಗತಿವಾಹಿನಿ ಸುದ್ದಿ, ನವದೆಹಲಿ :

 ಲೋಕಸಭೆಯಲ್ಲಿ ಇಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಜಂಟಿ ಸದನ ಉದ್ದೇಶಿಸಿ ಮಾತನಾಡಿದರು. ಈ ವೇಳೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮೊಬೈಲ್‌ನಲ್ಲಿ ಮುಳುಗಿದ್ದರು!

Home add -Advt

 ರಾಷ್ಟ್ರಪತಿಗಳು ಜಂಟಿ ಸದನ ಉದ್ದೇಶಿಸಿ ಸುಮಾರು ಒಂದು ಗಟೆಗೂ ಹೆಚ್ಚು ಕಾಲ ಮಾತನಾಡಿದರು. ಹಲವಾರು ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಿದರು. ಆದರೆ ರಾಷ್ಟ್ರೀಯ ಪಕ್ಷದ ನಾಯಕ ರಾಹುಲ್ ಗಾಂಧಿ ಮಾತ್ರ ಇದ್ಯಾವುದೂ ತಮಗೆ ಸಂಬಂಧವೇ ಇಲ್ಲ ಎನ್ನುವಂತೆ ಮೊಬೈಲ್ ನೋಡುತ್ತ ಕುಳಿತಿದ್ದರು.

ಅವರು ಮೊಬೈಲ್ ನೋಡುತ್ತ ಕುಳಿತಿದ್ದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅವರ ವರ್ತನೆ ಬಾರೀ ಟೀಕೆಗೆ ಗುರಿಯಾಗಿದೆ. ಪಕ್ಕದಲ್ಲೇ ಕುಳಿತಿದ್ದ ತಾಯಿ ಸೋನಿಯಾ ಗಾಂಧಿ ಗಂಭೀರವಾಗಿ ರಾಷ್ಟ್ರಪತಿಗಳ ಭಾಷಣ ಕೇಳುತ್ತ, ಅದಕ್ಕೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದರು. ಆದರೆ ರಾಹುಲ್ ಮಾತ್ರ ಸುಮಾರು 20 ನಿಮಿಷಕ್ಕೂ ಹೆಚ್ಚು ಹೊತ್ತು ಮೊಬೈಲ್ ನೋಡುತ್ತಿದ್ದರು. 

  

Related Articles

Back to top button