Latest

ಇಂಗ್ಲೆಂಡ್ ನಿಂದ ಜಗತ್ತಿಗೆ ಹೊಸ ಗೆಟಪ್ ನಲ್ಲಿ ದರ್ಶನ ನೀಡಿದ ರಾಹುಲ್

ಪ್ರಗತಿವಾಹಿನಿ ಸುದ್ದಿ, ಲಂಡನ್: ‘ಭಾರತ್ ಜೋಡೊ’ ಯಾತ್ರೆ ಸಂದರ್ಭದಿಂದ ಅಡ್ಡಾದಿಡ್ಡಿ ಬೆಳೆದ ಮೀಸೆ ಮತ್ತು ಗಡ್ಡದೊಂದಿಗೆ ಕಾಣಿಸಿಕೊಳ್ಳುತ್ತಲೇ ಇದ್ದ ರಾಹುಲ್ ಹೊಸ ಗೆಟಪ್ ಗೆ ತಿರುಗಿದ್ದಾರೆ.

ಇದರೊಂದಿಗೆ ಅವರು ಕಾಣಿಸಿಕೊಂಡಿದ್ದು ಇಂಗ್ಲೆಂಡ್ ನಲ್ಲಿ. ಮೊದಲೆಲ್ಲ ಕ್ಲೀನ್ ಶೇವ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದ ರಾಹುಲ್ ಯಾವಾಗ ಭಾರತ್ ಜೋಡೊ ಯಾತ್ರೆ ಆರಂಭವಾಯಿತೋ ಅಂದಿನಿಂದ ಶೇವ್ ಮಾಡಿರಲಿಲ್ಲ.

ಅಡ್ಡಾದಿಡ್ಡಿ ಬೆಳದಿದ್ದ ಅವರ ಗಡ್ಡ, ಮೀಸೆ ಬಗ್ಗೆ ಅವರ ಅಭಿಮಾನಿಗಳೂ ಯಾಕೋ ಮುಜುಗರ ವ್ಯಕ್ತಪಡಿಸಿದ್ದಿದೆ. ಮೊನ್ನೆಮೊನ್ನೆಯವರೆಗೂ ಅದೇ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದ ರಾಹುಲ್ ಫೆ.28ರಂದು ಇಂಗ್ಲೆಂಡ್ ಗೆ ತೆರಳಿದ್ದಾರೆ.

ಅಲ್ಲಿನ ಕ್ಯಾಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಅವರು ’21ನೇ ಶತಮಾನದಲ್ಲಿ ಆಲಿಕೆಯ ಕಲಿಕೆ’ ಎಂಬ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ. ಮಾ.4ರವರೆಗೂ ಇಂಗ್ಲೆಂಡ್ ನಲ್ಲಿ ಇರಲಿರುವ ಅವರು ಹೊಸ ಗೆಟಪ್ ನಲ್ಲಿ ನೀಡಿರುವ ಪೋಸ್ ಎಲ್ಲೆಡೆ ಗಮನ ಸೆಳೆದಿದೆ.

ಈ ಫೋಟೋದಲ್ಲಿ ಅವರ ಗಡ್ಡ, ಮೀಸೆ ಟ್ರಿಂ ಆಗಿದೆ. ಆಕಾಶ ನೀಲಿ ಷರ್ಟ್, ಮಿಲಿಟರಿ ಬ್ಲೂ ಕೋಟು ಹಾಗೂ ಕೆಂಪು ಟೈ ಧರಿಸಿರುವ ರಾಹುಲ್ ಏಕಾಏಕಿ ಬದಲಾದ ಗೆಟಪ್ ನಲ್ಲಿ ಕಂಡಿರುವುದಕ್ಕೆ ಅನೇಕ ಜನ ‘ಅಬ್ಬಾ..!’ ಅಂದಿದ್ದಾರೆ.

*NPS ವಿಚಾರ; ಸಮಿತಿ ರಚನೆ ಎಂದ ಸಿಎಂ*

https://pragati.taskdun.com/7th-pay-commissiongovt-employeescm-basavaraj-bommai/

*ರಾಜ್ಯ ಸರ್ಕಾರಿ ನೌಕರರ ಮುಷ್ಕರ ವಾಪಸ್; ಸಿ.ಎಸ್.ಷಡಕ್ಷರಿ ಘೋಷಣೆ*

https://pragati.taskdun.com/7th-pay-commissiongovt-employeesstrike-endc-s-shadakshari/

*ಸರ್ಕಾರಿ ನೌಕರರ ವೇತನ ಶೇ.17ರಷ್ಟು ಹೆಚ್ಚಳ; ಸಿಎಂ ಬೊಮ್ಮಾಯಿ ಮಾಹಿತಿ*

https://pragati.taskdun.com/7th-pay-commissiongovt-employeesstrikecm-basavaraj-biommai/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button