*ರಾಯಚೂರು ಜಿಲ್ಲೆಗೆ 107 ಹೊಸ ಬಸ್‌ಗಳ ನೀಡಿಕೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಘೋಷಣೆ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ ಸುವರ್ಣಸೌಧ: ರಾಯಚೂರು ಜಿಲ್ಲೆಯ ೭ ಸಾರಿಗೆ ಘಟಕಗಳಿಗೆ ೧೦೭ ಹೊಸ ಬಸ್‌ಗಳನ್ನು ಒದಗಿಸಲಾಗಿದ್ದು, ಅವಶ್ಯಕತೆಗನುಗುಣವಾಗಿ ಜಿಲ್ಲೆಗೆ ಇನ್ನೂ ಹೊಸಬಸ್‌ಗಳು ಒದಗಿಸಲು ಬದ್ಧ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಹೇಳಿದರು.
ವಿಧಾನಸಭೆಯಲ್ಲಿ ಶಾಸಕ ಬಸವನಗೌಡ ದದ್ದಲ್ ಅವರು ಕೇಳಿದ ಚುಕ್ಕೆಗುರುತಿನ ಪ್ರಶ್ನೆಗೆ ಅವರು ಉತ್ತರಿಸಿ ಮಾತನಾಡಿದರು. ಪೂರ್ಣಕವಚ ನಿರ್ಮಿತ ೨೫೦ ವೇಗದೂತ ಸಾರಿಗೆಗಳನ್ನು ಖರೀದಿಸಲು ಅನುಮೋದನೆ ನೀಡಲಾಗಿದೆ. ಪೂರ್ಣಕವಚ ನಿರ್ಮಿತ ೯೩ ನಗರ ಸಾರಿಗೆ ಬಸ್‌ಗಳನ್ನು ಡಲ್ಟ್ ಆರ್ಥಿಕ ಸಹಾಯದಿಂದ ಖರೀದಿಸಲು ಮಂಜೂರಾತಿ ದೊರೆತಿದ್ದು, ಖರೀದಿ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಅವರು ಹೇಳಿದರು.
ಮುಂದಿನ ದಿನಗಳಲ್ಲಿ ಪೂರ್ಣಗೊಂಡ ಹೊಸಬಸ್ ಡಿಪೋ ಜೊತೆಗೆ ಇತರೆ ಘಟಕಗಳಿಗೆ ಅವಶ್ಯಕತೆಗನುಗುಣವಾಗಿ ಹೊಸ ಬಸ್‌ಗಳನ್ನು ಒದಗಿಸಲಾಗುವುದು ಎಂದು ಹೇಳಿದರು.
ರಾಯಚೂರಿನಲ್ಲಿ ನೂತನ ಬಸ್‌ಘಟಕದ ಕಾಮಗಾರಿ ಪೂರ್ಣಗೊಂಡಿದ್ದು,ಶೀಘ್ರದಲ್ಲಿ ಉದ್ಘಾಟಿಸಿ ಕಾರ್ಯಾಚರಣೆ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದ ಅವರು ರಾಯಚೂರು ಜಿಲ್ಲೆಯಲ್ಲಿ ಒಟ್ಟು ೦೭ ಬಸ್‌ಘಟಕಗಳಿದ್ದು,೬೬೫ಬಸ್‌ಗಳಿದ್ದು,ಅವುಗಳಲ್ಲಿ ೬೫೪ ಬಸ್‌ಗಳು ಚಾಲನೆಯಲ್ಲಿವೆ ಎಂದು ಅವರು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ