Latest

ಆಸ್ಪತ್ರೆಗೆ ಹೋಗಲಾಗದೇ ಪರದಾಡಿ ಪ್ರಾಣಬಿಟ್ಟ ಸೋಂಕಿತ

ಪ್ರಗತಿವಾಹಿನಿ ಸುದ್ದಿ; ರಾಯಚೂರು: ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ 48 ವರ್ಷದ ಕೊರೊನಾ ಸೋಂಕಿತ ಆಂಬುಲೆನ್ಸ್ ಸಿಗದೇ ನರಳಾಡಿ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಬೇರೂನ್ ಕಿಲ್ಲಾದಲ್ಲಿ ನಡೆದಿದೆ.

ಆಂಬುಲೆನ್ ಸಿಬ್ಬಂದಿಗಳ ಬೇಜವಾಬ್ದಾರಿ ಹಾಗೂ ಸಮಯಕ್ಕೆ ಸರಿಯಾಗಿ ಬಾರದ ಕಾರಣ ಕೊರೊನಾ ಸೋಂಕಿತ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಆಂಬುಲೆನ್ಸ್ ಗೆ ಕರೆ ಮಾಡಿದಾಗ ಮೊದಲು ತಡವಾಗಿ ಆಂಬ್ಯುಲೆನ್ಸ್ ಬಂದಿದೆ. ಆದರೆ ಕೇವಲ ಒಬ್ಬ ಸಿಬ್ಬಂದಿ ಮಾತ್ರ ಬಂದಿದ್ದರು. ರೋಗಿ ಮೊದಲ ಮಹಡಿಯಲ್ಲಿದ್ದರಿಂದ ಕೆಳಗೆ ಕರೆತರಲು ಆಗಲಿಲ್ಲ. ಇದರಿಂದ ಆಂಬ್ಯುಲೆನ್ಸ್ ವಾಪಸ್ ಹೋಗಿದೆ.

ಸ್ಥಳೀಯರು ಅಧಿಕಾರಿಗಳ ಗಮನಕ್ಕೆ ತಂದಿದ್ದರಿಂದ ಪುನಃ ಬಂದು ಅಂಬ್ಯುಲೆನ್ಸ್ ನಲ್ಲಿ ರೋಗಿಯನ್ನ ಕರೆದ್ಯೊಯಲಾಗಿದೆ. ಆದರೆ ರೋಗಿ ಸ್ಥಿತಿ ಅಷ್ಟರಲ್ಲಾಗಲೇ ಗಂಭೀರವಾಗಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಇದಕ್ಕೆ ಆರೋಗ್ಯ ಇಲಾಖೆಯೆ ಹೊಣೆ ಎಂದು ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Home add -Advt

ಇದಲ್ಲದೇ ಜಿಲ್ಲೆಯಲ್ಲಿ ಆರೋಗ್ಯ ಸಿಬ್ಬಂದಿಗಳು ರೋಗಿಗಳ ಮನೆಯಲ್ಲೆ ಪಿಪಿಇ ಕಿಟ್ ಬೀಸಾಡಿ ಹೋಗುತ್ತಿದ್ದು, ಸ್ಯಾನಿಟೈಸ್ ಮಾಡಲು ಬಂದ ನಗರಸಭೆ ಪೌರಕಾರ್ಮಿಕ ಇವುಗಳನ್ನು ಹೊರತೆಗೆದುಕೊಂಡು ಹೋಗುವ ಪರಿಸ್ಥಿತಿಯಿದೆ. ಇನ್ನೂ ರಾಸಾಯನಿಕ ಸಿಂಪಡಣೆ ಮಾಡುವ ಸಿಬ್ಬಂದಿಗೆ ಮಾಸ್ಕ ಬಿಟ್ಟು ಬೇರೆ ರಕ್ಷಣಾ ಸಾಮಗ್ರಿ ನೀಡಿಲ್ಲ. ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವಾಗಲೂ ಆರೋಗ್ಯ ಇಲಾಖೆ ಹಾಗೂ ನಗರಸಭೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.

Related Articles

Back to top button