Latest

ರಿಮ್ಸ್ ಆಸ್ಪತ್ರೆ ಸಿಬ್ಬಂದಿಗೂ ಕೊರೊನಾ ಸೋಂಕು

ಪ್ರಗತಿವಾಹಿನಿ ಸುದ್ದಿ; ರಾಯಚೂರು: ರಾಯಚೂರು ಜಿಲ್ಲೆಯಲ್ಲಿ ಕರೊನಾ ಅಟ್ಟಹಾಸ ಮುದುವರೆದಿದ್ದು, ಈ ನಡುವೆ ಕೊರೊನಾ ವಾರಿಯಸ್ ಗೂ ಸೋಂಕು ತಗುಲಿರುವುದು ಜಿಲ್ಲೆಯ ಜನತೆಯಲ್ಲಿ ಆತಂಕ ಹೆಚ್ಚಿಸಿದೆ.

ರಾಯಚೂರು ಜಿಲಾಸ್ಪತ್ರೆ ರಿಮ್ಸ್​ನ 8 ಮಂದಿ ವೈದ್ಯಕೀಯ ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡಿದೆ. ವೈದ್ಯಕೀಯ ಸಿಬ್ಬಂದಿಗೆ ಸೋಂಕು ಬಂದ ಹಿನ್ನಲೆಯಲ್ಲಿ ಸಚಿವ ಡಾ.ಕೆ ಸುಧಾಕರ್ ವರದಿ ನೀಡುವಂತೆ ಕೇಳಿದ್ದಾರೆ.

ರಾಯಚೂರಿನಲ್ಲಿ ಇಲ್ಲಿಯವರೆಗೂ 378 ಜನರಿಗೆ ಕೊರೋನಾ ಬಂದಿದೆ. ಇದರಲ್ಲಿ 4 ಮಂದಿ ಪೊಲೀಸರು ಮತ್ತು ಓರ್ವ ಆಶಾ ಕಾರ್ಯಕರ್ತೆಯೊಂದಿಗೆ ಪೋಸ್ಟ್​ ಮ್ಯಾನ್​ ಕೂಡ ಇದ್ದಾರೆ. ಈ ನಡುವೆಯೇ ಕೋವಿಡ್​​-19 ಆಸ್ಪತ್ರೆಯಲ್ಲಿ ಕೆಲಸ ಮಾಡುವ 8 ಮಂದಿ ಕೊರೋನಾ ವಾರಿಯರ್ಸ್​ಗೆ ಸೋಂಕು ತಗುಲಿದೆ. ಇನ್ನು, 8 ಮಂದಿಗೆ ಪ್ರತ್ಯೇಕ ಕೊಠಡಿಗಳಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button