Karnataka NewsNational

*ರೈಲ್ವೇ ಇಲಾಖೆಯಿಂದ ಕರ್ನಾಟಕ ಭಾರತ ಗೌರವ ದಕ್ಷಿಣ ಯಾತ್ರೆ ಆರಂಭ*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ಇಲಾಖೆ ಹಾಗೂ ಐಆರ್‌ಸಿಟಿಸಿ ಸಹಯೋಗದಲ್ಲಿ “ಕರ್ನಾಟಕ ಭಾರತ ಗೌರವ ದಕ್ಷಿಣ ಯಾತ್ರೆ”ಯನ್ನು ಪ್ರಾರಂಭಿಸಲಾಗಿದೆ.

ಈ ವಿಶೇಷ ಪ್ರವಾಸ ರೈಲಿನಲ್ಲಿ, ಭಾರತೀಯ ಪೌರಾಣಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆ ಹೊಂದಿರುವ ಕನ್ಯಾಕುಮಾರಿ, ತಿರುವನಂತಪುರಂ, ರಾಮೇಶ್ವರಂ ಮತ್ತು ಮದುರೈ ಕ್ಷೇತ್ರಗಳನ್ನು ಒಳಗೊಂಡಿರುತ್ತವೆ.

ಪ್ರವಾಸದ ವಿವರಗಳು

ಯಾತ್ರೆ ಅವಧಿ: 25 ಜೂನ್ 2025 ರಿಂದ 30 ಜೂನ್ 2025 (6 ದಿನಗಳು)

ಪ್ರವಾಸ ದರ: ಪ್ರತಿ ಪ್ರಯಾಣಿಕರಿಗೆ ₹15,000/-

ವಿಶೇಷ ಕೊಡುಗೆ: ಕರ್ನಾಟಕದ ನಿವಾಸಿ ಪ್ರಯಾಣಿಕರಿಗೆ ಸರ್ಕಾರದಿಂದ ₹5,000/- ಸಹಾಯಧನ (ವೈದ್ಯಕೀಯ ಪ್ರಮಾಣಪತ್ರ/ನಿವಾಸ ಪ್ರಮಾಣಪತ್ರ ಆಧಾರಿತ)

ಮುಖ್ಯ ದರ್ಶನ ಸ್ಥಳಗಳು

ಕನ್ಯಾಕುಮಾರಿ: ಭಗವತಿ ದೇವಿ ದರ್ಶನ ಮತ್ತು ವಿವೇಕಾನಂದ ಶಿಲಾಸ್ಮಾರಕ

ತಿರುವನಂತಪುರಂ: ಪದ್ಮನಾಭಸ್ವಾಮಿ ದೇವಾಲಯ

ರಾಮೇಶ್ವರಂ: ರಾಮನಾಥಸ್ವಾಮಿ ದೇವಾಲಯ

ಮದುರೈ: ಮೀನಾಕ್ಷಿ ದೇವಾಲಯ

ಹತ್ತುವ ಸ್ಥಳಗಳು: ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಬೀರೂರು, ತುಮಕೂರು, ಎಸ್‌ಎಂವಿಟಿ ಬೆಂಗಳೂರು

ಪ್ರಮುಖ ವೈಶಿಷ್ಟ್ಯಗಳು

ಭಾರತ ಗೌರವ್ ಪ್ರವಾಸ ರೈಲಿನಲ್ಲಿ ಎಸಿ III ಟೈರ್ ವಿಭಾಗದಲ್ಲಿ ಪ್ರಯಾಣ, ಕನ್ಯಾಕುಮಾರಿ ಮತ್ತು ರಾಮೇಶ್ವರಂನಲ್ಲಿ ಹವಾನಿಯಂತ್ರಿತವಲ್ಲದ ಕೊಠಡಿಗಳಲ್ಲಿ ಇಬ್ಬರು/ಮೂರು ಜನ ಹಂಚಿಕೊಂಡು ಒಂದು ರಾತ್ರಿ ವಾಸ್ತವ್ಯ, ಪ್ರವಾಸದ ಅವಧಿಯಲ್ಲಿ ಸಸ್ಯಾಹಾರಿ ಆಹಾರ ಒದಗಿಸಲಾಗುತ್ತದೆ, ಸ್ಥಳಾಂತರ ಮತ್ತು ಸ್ಥಳ ವೀಕ್ಷಣೆಗಳಿಗೆ ಹವಾನಿಯಂತ್ರಿತವಲ್ಲದ ಬಸ್ ಸೇವೆ, ಪ್ರತಿಕೋಚ್‌ಗೆ ಪ್ರವಾಸ ಮಾರ್ಗದರ್ಶಕರು, ಪ್ರಯಾಣ ವಿಮೆ ಹಾಗೂ ರೈಲಿನಲ್ಲಿ IRCTC ವ್ಯವಸ್ಥಾಪಕರ ನೇತೃತ್ವ, ರೈಲಿನಲ್ಲಿ ಭದ್ರತಾ ವ್ಯವಸ್ಥೆ, ಎಲ್ಲಾ ಅನ್ವಯಿಸಬಹುದಾದ ತೆರಿಗೆಗಳು ಸೇರಿವೆ. 

ಬುಕಿಂಗ್ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 

IRCTC ಸಂಪರ್ಕ ಸಂಖ್ಯೆ:

ಬೆಂಗಳೂರು – 9363488229 / 9003140708 / 9003140710 / 8595931290 ಮೈಸೂರು – 8595931294 / 9731641611 ಹುಬ್ಬಳ್ಳಿ – 8595931293 / 8595931291 ಅಧಿಕೃತ ವೆಬ್‌ಸೈಟ್: www.irctctourism.com

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button