*ಬೆಂಗಳೂರಿನಲ್ಲಿ ಮಳೆ ಅವಾಂತರ*: *ನೀರಿನಲ್ಲಿ ತೇಲಿದ ಕಾರು, ಅಂಗಡಿಗಳು ಜಲಾವೃತ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ. ಪಣತ್ತೂರು ಅಂಡರ್‌ಪಾಸ್‌ನಲ್ಲಿ ನೀರು ತುಂಬಿ ಕಾರೊಂದು ಸಿಲುಕಿದರೆ, ಮತ್ತೊಂದೆಡೆ ಚಾಮರಾಜಪೇಟೆಯ ಏಳು ಅಂಗಡಿಗಳಿಗೆ ಮಳೆ ನೀರು ನುಗ್ಗಿದೆ. ಅಷ್ಟೇ ಅಲ್ಲ, ಕೋಲಾರದಲ್ಲಿ ಹಳೆಯ ಅಂಗನವಾಡಿ ಕಟ್ಟಡಕ್ಕೂ ನೀರು ನುಗ್ಗಿದ್ದು, ಮೈಸೂರಿನಲ್ಲಿ ಎತ್ತು ನೀರಿನ ಪಾಲಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಮಳೆ ಅವಾಂತರ ಮುಂದುವರಿದಿದ್ದು, ಮುಂದಿನ ಮೂರು ದಿನಗಳಿಗೂ ಮಳೆ ಎಚ್ಚರಿಕೆ ನೀಡಲಾಗಿದೆ. ಬೆಂಗಳೂರಿನ ಪಣತ್ತೂರು ರೈಲ್ವೆ ಅಂಡರ್‌ಪಾಸ್‌ನಲ್ಲಿ ನೀರು ಹರಿದುಹೋಗಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ … Continue reading *ಬೆಂಗಳೂರಿನಲ್ಲಿ ಮಳೆ ಅವಾಂತರ*: *ನೀರಿನಲ್ಲಿ ತೇಲಿದ ಕಾರು, ಅಂಗಡಿಗಳು ಜಲಾವೃತ*