
ಪ್ರಗತಿವಾಹಿನಿ ಸುದ್ದಿ; ಚೆನ್ನೈ: ಕೆಲ ವರ್ಷಗಳಿಂದ ರಾಜಕಾರಣದ ಬಗ್ಗೆ ಆಸಕ್ತಿ ವಹಿಸಿದ್ದ ಸೂಪರ್ ಸ್ಟಾರ್ ರಜನಿಕಾಂತ್, ಇಂದು ಆಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇಂದಿನ ರಾಜಕೀಯ ವ್ಯವಸ್ಥೆಯನ್ನು ಬದಲಾಯಿಸಬೇಕಿದೆ. ಇದೇ ಉದ್ದೇಶದಿಂದಲೇ ನಾನು ರಾಜಕೀಯ ಪ್ರವೇಶಿಸಿದ್ದು, ‘ಮಕ್ಕಳ್ ಮಂಡ್ರಂ’ ಎಂಬ ಪಕ್ಷ ಸ್ಥಾಪಿಸಿದ್ದೇನೆ ಎಂದು ತಿಳಿಸಿದ್ದಾರೆ.
ಚೆನ್ನೈನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಜನಿಕಾಂತ್, ತಮ್ಮ ರಾಜಕೀಯ ಜೀವನದ ಬಗ್ಗೆ ಮಾಹಿತಿ ನೀಡಿದರು. ವ್ಯವಹಾರವಾಅಗಿರುವ ಇಂದಿನ ರಾಜಕೀಯ ವ್ಯಾವಾಸ್ಥೆ ಬದಲಾಗಬೇಕು. ಮತಗಳಿಕೆಗೆ ಮಾತ್ರ ರಾಜಕಾರಣ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ ಅನುದಾನಗಳು, ಯೋಜನೆಗಳು ಜನರಿಗೆ ತಲುಪುತ್ತಿಲ್ಲ. ಇದರಿಂದ ಬಡ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಡೀ ವ್ಯವಸ್ಥೆ ಜಿಡ್ಡುಗಟ್ಟಿ ಹೋಗಿದೆ. ಈ ವ್ಯವಸ್ಥೆಯನ್ನು ಬದಲಾಯಿಸಬೇಕು ಎಂದರು.
ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಮರಣದ ನಂತರ ತಾಮಿಳುನಾಡಿನಲ್ಲಿ ರಾಜಕೀಯ ಸ್ಥಿತಿ ಶೋಚನೀಯವಾಗಿದೆ. ರಾಜ್ಯದಲ್ಲಿ ಮತ್ತೆ ರಾಜಕೀಯ ಅಸ್ಥಿತ್ವವನ್ನು ತುಂಬಬೇಕಿದೆ. ಹಾಗಂತ ನನಗೆ ಸಿಎಂ ಆಗುವ ಆಸೆಯಿಲ್ಲ. ಪಕ್ಷ ಬೇರೆ, ಸರ್ಕಾರ ಬೇರೆ. ಜನರಿಗೆ ಒಳ್ಳೆಯದು ಮಾಡುವುದೇ ನನ್ನ ಉದ್ದೇಶ. ಇದೇ ಕಾರಣಕ್ಕೆ ಪಕ್ಷ ಸ್ಥಾಪಿಸಲು ಮುಂದಾಗಿದ್ದೇನೆ ಎಂದು ಹೇಳಿದರು.
ನನ್ನ ಪಕ್ಷದಲ್ಲಿ ಶೇ.60-65 ರಷ್ಟು ಯುವಕರಿಗೆ ಸ್ಥಾನ ನೀಡುತ್ತೇನೆ. ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಮೊದಲ ಆದ್ಯತೆ ಮತ್ತು ಸುಶಿಕ್ಷಿತರಿಗೆ ಮಾತ್ರ ನಾನು ಸ್ಥಾನ ನಿಡುತ್ತೇನೆ ಎಂದು ತಿಳಿಸಿದ್ದಾರೆ.
ಒಟ್ಟಾರೆ ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಗೆ ರಜನಿಕಾಂತ್ ನೇತೃತ್ವದ ಪಕ್ಷ ಸ್ಪರ್ಧೆಗೆ ಸಿದ್ಧವಾಗಿದ್ದು, ಸೂಪರ್ ಸ್ಟಾರ್ ಅಧಿಕಾರಕ್ಕೆ ಬರುತ್ತಾರಾ ಕಾದುನೋಡಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ