Latest

ಡಿಸೆಂಬರ್ 31ಕ್ಕೆ ರಜನಿಕಾಂತ್ ಹೊಸ ಪಕ್ಷ ಘೋಷಣೆ

ಪ್ರಗತಿವಾಹಿನಿ ಸುದ್ದಿ; ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಪ್ರವೇಶದ ಬಗ್ಗೆ ಇದ್ದ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಡಿಸೆಂಬರ್ 31ರಂದು ಹೊಸ ಪಕ್ಷ ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದಾರೆ.

ಈ ಕುರಿತು ಸ್ವತ: ಟ್ವೀಟ್ ಮಾಡಿರುವ ರಜನಿಕಾಂತ್, ಹೊಸ ವರ್ಷದಂದು ನಾನು ನೂತನ ಪಕ್ಷ ಘೋಷಣೆ ಮಾಡಲಿದ್ದು, ಈ ಬಾರಿಯ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಸ್ಪರ್ಧೆ ಮಾಡಲಿದೆ. ಜನ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡಿ, ಉತ್ತಮ ಆಡಳಿತ ನೀಡುವುದಾಗಿ ತಿಳಿಸಿದ್ದಾರೆ.

ರಾಜಕೀಯಕ್ಕೆ ಬರುವುದಾಗಿ ಮೊದಲೇ ಹೇಳಿದ್ದೆ. ಆದರೆ ಕೊರೊನಾದಿಂದಾಗಿ ಕೊಂಚ ವಿಳಂಬವಾಗಿದೆ. ಇದು ನಮ್ಮ ಯೋಜನೆ ಮೇಲೆ ಪರಿಣಾಮ ಬಿದ್ದಿದೆ. ಇದೀಗ ಪಕ್ಷ ಸ್ಥಾಪನೆ ನಿರ್ಧಾರ ಮಾಡಿದ್ದು, ಸಂತಸ ತಂದಿದೆ. ಎಲ್ಲಾ ಬದಲಾವಣೆಗಳು ತಮಿಳುನಾಡು ಜನತೆಯ ಮೇಲೆ ಬಿಟ್ಟದ್ದು ಎಂದು ಹೇಳಿದ್ದಾರೆ.

Home add -Advt

Related Articles

Back to top button