ಪ್ರಗತಿವಾಹಿನಿ ಸುದ್ದಿ, ಬಾರ್ಮರ್:ಸಾರ್ವಜನಿಕ ಕಾರ್ಯಕ್ರಮದಲ್ಲಿ ಮೈಕ್ ಸರಿಯಾಗಿ ಕಾರ್ಯನಿರ್ವಹಿಸದ್ದಕ್ಕೆ ಸಿಟ್ಟಿಗೆದ್ದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮೈಕ್ ಜಿಲ್ಲಾಧಿಕಾರಿ ಮೇಲೆ ಎಸೆದು ಆಕ್ರೋಶ ವ್ಯಕ್ತಪಡಿಸಿದ ವಿಡಿಯೊವೊಂದು ವೈರಲ್ ಆಗಿದೆ.
ಮಹಿಳೆಯರಿಗಾಗಿ ವಿವಿಧ ಸರಕಾರಿ ಯೋಜನೆಗಳ ಕುರಿತು ಪ್ರತಿಕ್ರಿಯೆ ಸಂಗ್ರಹಿಸಲು ಮಹಿಳೆಯರ ಗುಂಪಿನೊಂದಿಗೆ ಸಂವಾದ ನಡೆಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಅಶೋಕ್ ಗೆಹ್ಲೋಟ್ ಅವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಲು ಮುಂದಾಗಿದ್ದರು. ಕೈಗೆ ನೀಡಿದ ಮೈಕ್ ಒಮ್ಮೆ ಊದಿ ನೋಡಿದ ಅವರು ಅದು ನಡೆಯದಿದ್ದಾಗ ಎದುರಿಗೆ ಇದ್ದವರ ಬಳಿ ಇನ್ನೊಂದು ಮೈಕ್ ಗೆ ಕೈ ಚಾಚಿದರು. ಅದನ್ನು ಕೊಡುವ ಮೊದಲೇ ಕೈಯ್ಯಲ್ಲಿದ್ದ ಮೈಕ್ ನ್ನು ತೆಗೆದು ಸಿಟ್ಟಿಗೆದ್ದು ಜಿಲ್ಲಾಧಿಕಾರಿಯತ್ತ ಎಸೆದರು.
ಇದರಿಂದ ವಿಚಲಿತರಾ ಜಿಲ್ಲಾಧಿಕಾರಿ ನೆಲಕ್ಕೆ ಬಿದ್ದ ಮೈಕ್ ಕೈಗೆತ್ತಿಕೊಂಡರು.ಮಹಿಳೆಯರ ಗುಂಪಿನ ಹಿಂದೆ ಕೆಲವರು ನಿಂತಿದ್ದನ್ನು ಕಂಡು ಮುಖ್ಯಮಂತ್ರಿಗಳು ಮತ್ತಷ್ಟು ತಾಳ್ಮೆ ಕಳೆದುಕೊಂಡರು“ಎಸ್ಪಿ ಎಲ್ಲಿದ್ದಾರೆ? ಎಸ್ಪಿ ಮತ್ತು ಕಲೆಕ್ಟರ್ ಇಬ್ಬರೂ ಒಂದೇ ರೀತಿ ಕಾಣುತ್ತಾರೆ” ಎಂದು ಬೇರೆ ಹೇಳಿದರು.
*ಪಕ್ಷ, ಭಾಷೆ ನೋಡದೆ ಎಲ್ಲರ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದೇನೆ”: ಲಕ್ಷ್ಮೀ ಹೆಬ್ಬಾಳಕರ್*
7 hours ago
*2-3 ದಿನಗಳಲ್ಲಿ ಸಂಪುಟಕ್ಕೆ ಮಹಿಳಾ ಸಚಿವರ ಸೇರ್ಪಡೆ: ಡಿ.ಕೆ. ಶಿವಕುಮಾರ್*
8 hours ago
*ನಾಳೆ ದೆಹಲಿಗೆ ಸಿಎಂ ಡಿ.ಕೆ. ಶಿವಕುಮಾರ್ ಭೇಟಿ: ನದಿ ನೀರು ವಿವಾದ ಕುರಿತು ಸುಪ್ರೀಂ ಕೋರ್ಟ್ ವಕೀಲರ ಜೊತೆ ಮಹತ್ವದ ಸಭೆ*
8 hours ago
*ಮೈಸೂರು ದಸರಾ ಮಹೋತ್ಸವ-2026: ಗಜಪಯಣಕ್ಕೆ ಚಾಲನೆ*
9 hours ago
*ಎಐ ಯುಗದಲ್ಲೂ ಆಧ್ಯಾತ್ಮಿಕ ಮೌಲ್ಯಗಳನ್ನು ಉಳಿಸಿಕೊಂಡು ಮುನ್ನಡೆಯುತ್ತಿರುವುದು ನಮ್ಮ ಹೆಮ್ಮೆ: ಲಕ್ಷ್ಮೀ ಹೆಬ್ಬಾಳಕರ್* *ಹೊನ್ನಿಹಾಳದಲ್ಲಿ ಭಕ್ತಿಭಾವದ ಮಹಾಗಣಪತಿ ಪ್ರಾಣಪ್ರತಿಷ್ಠಾಪನೆ*