ತಾಯಿ ಆಸ್ತಿಗಾಗಿ ಈ ಮಗ ಮಾಡಿದ್ದೇನು ಗೊತ್ತಾ?

ಪ್ರಗತಿವಾಹಿನಿ ಸುದ್ದಿ; ಜೈಪುರ: ತಾಯಿಯ ನಗ್ನ ಫೋಟೋ ಕ್ಲಿಕ್ಕಿಸಿ ಆಸ್ತಿಗಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ನೀಚ ಮಗನನ್ನು ಪೊಲೀಸರು ಬಂಧಿಸಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

ರಾಜಸ್ಥಾನದ ಶಿವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, 75 ವರ್ಷದ ವೃದ್ಧ ತಾಯಿ,  50 ವರ್ಷದ ಮಗನ ವಿರುದ್ಧ ದೂರು ದಾಖಲಿಸಿದ್ದಾರೆ.

ತಾಯಿ ಮತ್ತು ಮಗನ ನಡುವೆ ಆಸ್ತಿಯ ವಿಚಾರವಾಗಿ ವೈಮನಸ್ಸು ಉಂಟಾಗಿತ್ತು. ಆಸ್ತಿ ಆಸೆಗಾಗಿ ಮಗ ತಾಯಿಯ ಅಶ್ಲೀಲ ಫೋಟೋ ಕ್ಲಿಕ್ಕಿಸಿ, ಕುಟುಂಬಸ್ಥರ ಮೊಬೈಲ್ ಗೆ ವಾಟ್ಸಾಪ್ ಮಾಡಿದ್ದಾನೆ.

ತಾಯಿ ತನ್ನ ಮನೆಯಲ್ಲಿ ಹವನ ಮಾಡುತ್ತಾ ಪೂಜೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಬಂದ ಮಗ ಬೆಂಕಿ ಹತ್ತಿಕೊಂಡ ನಾಟಕವಾಡಿ, ಬಟ್ಟೆ ಕಳಚಿ ದೂರ ಬರುವಂತೆ ತಾಯಿಗೆ ಹೇಳಿದ್ದಾನೆ. ಬೆಂಕಿಯಿಂದ ಪಾರಾಗಲು ವೃದ್ಧೆ ಮಗ ಹೇಳಿದಂತೆ ಬಟ್ಟೆ ತೆಗೆದಿದ್ದಾರೆ. ಈ ಸಮಯದಲ್ಲಿಯೇ ಫೋಟೋ ತೆಗೆದುಕೊಂಡಿದ್ದಾನೆ. ಬಳಿಕ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದಾನೆ.

Home add -Advt

ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿ ತಾರಾಚಂದ್, ಎರಡು ದಿನಗಳ ಹಿಂದೆ ಠಾಣೆಗೆ ಬಂದ ವೃದ್ಧೆ ತನ್ನ 50 ವರ್ಷದ ಮಗನ ವಿರುದ್ಧ ದೂರು ದಾಖಲಿಸಿದ್ದರು. ಪುತ್ರ ತನ್ನ ನಗ್ನ ಚಿತ್ರಗಳನ್ನು ಕ್ಲಿಕ್ಕಿಸಿ ಆಸ್ತಿ ಬರೆದುಕೊಡುವಂತೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಹೇಳಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button