*ಈ ಊರಿನಲ್ಲಿ ನವವಧುಗಳು ಮೊದಲು ಮಾವನ ಜೊತೆ ಸಂಬಂಧ ಬೆಳೆಸುತ್ತಾರೆ: ವಿವಾದ ಸೃಷ್ಟಿಸಿದ್ದ ವಿಡಿಯೋ: ಮಹಿಳೆಯ ಹೇಳಿಕೆ ಸುಳ್ಳು ಎಂದ ಪೊಲೀಸರು*

ಪ್ರಗತಿವಾಹಿನಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ಪ್ರಚಾರಕ್ಕಾಗಿ ಮನಸ್ಸಿಗೆ ಬಂದತ್ತೆ ಹೇಳಿಕೆ ನೀಡುವುದು, ವಿವಾದಗಳನ್ನು ಸೃಷ್ಟಿಸಿ ವೈರಲ್ ಆಗುವ ಪ್ರಕರಣಗಳು ಹೆಚ್ಚುತ್ತಿವೆ. ಅದೇ ರೀತಿ ರಾಜಸ್ಥಾನದ ಸಂಪ್ರದಾಯದ ಪ್ರಕಾರ ನವವಧುಗಳು ಮೊದಲು ಮಾವನ ಜೊತೆ ಸಂಬಂಧ ಬೆಳೆಸುತ್ತಾರೆ ಎಂದು ಹೇಳಿಕೆ ನೀಡುವ ಮೂಲಕ ಮಹಿಳೆಯೊಬ್ಬರು ತೀವ್ರ ಚರ್ಚೆಗೆ ಕಾರಣರಾಗಿದ್ದರು.
ಪಾಡ್ ಕಾಸ್ಟ್ ನಲ್ಲಿ ಮಹಿಳೆಯೊಬ್ಬರು, ರಾಜಸ್ಥಾನ ಸಂಪ್ರದಾಯದ ಪ್ರಕಾರ ನವವಧು ಮೊದಲಿಗೆ ಮಾವನೊಂದಿಗೆ ಸಂಬಂಧ ಬೆಳೆಸುತ್ತಾಳೆ. ಬಳಿಕ ಭಾವನೊಂದಿಗೆ ಆನಂತರದಲ್ಲಿ ಗಂಡನೊಂದಿಗೆ ಸಂಬಂಧ ಬೆಳೆಸಬೇಕು. ಅಷ್ಟೇ ಅಲ್ಲ ಮೊದಲ ಮಗುವನ್ನು ಗರ್ಭಪಾತ ಮಾಡಿಸುವ ಪದ್ಧತಿಯೂ ಇದೆ ಎಂದು ಹೇಳಿಕೆ ನೀಡಿದ್ದರು. ಮಹಿಳೆಯ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿತ್ತು.
ಇದೀಗ ಈ ಬಗ್ಗೆ ರಾಜಸ್ಥಾನ ಪೊಲೀಸರು ಸ್ಪಷ್ಟನೆ ನೀಡಿದ್ದು, ಮಹಿಳೆಯ ಹೇಳಿಕೆ ಸುಳ್ಳು. ರಾಜಸ್ಥಾನದಲ್ಲಿ ಅಂತಹ ಯಾವುದೇ ಸಂಪ್ರದಾಯವಾಗಲಿ, ಪದ್ಧತಿಯಾಗಲಿ ಇಲ್ಲ. ಮಹಿಳೆಯ ಹೇಳಿಕೆ ನಕಲಿ ಹಾಗೂ ಸಂಪೂರ್ಣ ಸುಳ್ಳು ಎಂದು ತಿಳಿಸಿದ್ದಾರೆ.