Kannada NewsKarnataka NewsLatest

ಕೆಎಲ್ಇ ಸಂಸ್ಥೆಯ ಉಪಾಧ್ಯಕ್ಷ ರಾಜೇಂದ್ರ ಹಂಜಿ ನಿಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೆಎಲ್ಇ ಸಂಸ್ಥೆಯ ಉಪಾಧ್ಯಕ್ಷ, ಉದ್ಯಮಿ ರಾಜೇಂದ್ರ ಹಂಜಿ (58) ಶನಿವಾರ ಸಂಜೆ ನಿಧನರಾಗಿದ್ದಾರೆ. ಕೆಲವು ಕಾಲದಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.

ಬೆಳಗಾವಿಯ ಹಿಂದವಾಡಿಯಲ್ಲಿ ಅವರು ವಾಸವಾಗಿದ್ದರು. ಅರಣ್ಯ ಗುತ್ತಿಗೆದಾರರಾಗಿ ಅವರು ಕೆಲಸ ಮಾಡುತ್ತಿದ್ದರು.

Home add -Advt

ಖಾನಾಪುರ ಮೂಲದವರಾಗಿದ್ದ ರಾಜೇಂದ್ರ ಹಂಜಿ ಅವರ ತಂದೆ ವಿ.ಸಿ.ಹಂಜಿ ಕೆಎಲ್ಇ ಸಂಸ್ಥೆಯ ನಿರ್ದೇಶಕರಾಗಿ ಬಹು ಕಾಲ ಸೇವೆಸಲ್ಲಿಸಿದ್ದರು. ಅವರ ನಿಧನ ನಾಂತರ ಇದೇ ಮೊದಲ ಬಾರಿಗೆ ರಾಜೇಂದ್ರ ಹಂಜಿ ಕೆಎಲ್ಇ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಲ್ಲದೆ ಉಪಾಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು. ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿಯೂ ಅವರು ಸೇವೆ ಸಲ್ಲಿಸಿದ್ದರು.

ಅವರು ಪತ್ನಿ ಹಾಗೂ ಮಗನನ್ನು ಅಗಲಿದ್ದಾರೆ.

ರಾಜೇಂದ್ರ ಹಂಜಿ ನಿಧನಕ್ಕೆ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ನಿರ್ದೇಶಕ ಮಹಾಂತೇಶ ಕವಟಗಿಮಠ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Related Articles

Back to top button