Latest

‘ಕೈ’ ಜತೆ ಸೇರಿದ್ದೇನೆ ಕಾಂಗ್ರೆಸ್ ಗೆ ಮತ ಹಾಕಿದ್ದೇನೆ ಎಂದ ಜೆಡಿಎಸ್ ಶಾಸಕ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯಸಭಾ ಚುನಾವಣೆ ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುತ್ತಿದ್ದು, ಅಡ್ಡಮತದಾನದ ಭೀತಿಯಲ್ಲಿದ್ದ ಜೆಡಿಎಸ್ ಗೆ ಶಾಸಕರೇ ಕೈಕೊಟ್ಟಿದ್ದಾರೆ. ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ಕಾಂಗ್ರೆಸ್ ಗೆ ಮತಹಾಕುವ ಮೂಲಕ ಕ್ರಾಸ್ ವೋಟಿಂಗ್ ಮಾಡಿದ್ದಾರೆ.

ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿಧಾನಸೌಢದ ಕೊಠಡಿ ಸಂಖ್ಯೆ 106ರಲ್ಲಿ ಮತದಾನ ನಡೆಯುತ್ತಿದ್ದು, ಕೋಲಾರ ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ಕಾಂಗ್ರೆಸ್ ಗೆ ಮತಹಾಕಿದ್ದಾರೆ.

ಹಕ್ಕು ಚಲಾವಣೆ ಬಳಿಕ ಮಾತನಾಡಿದ ಶ್ರೀನಿವಾಸ್ ಗೌಡ, ನಾನು ಕೈ ಜತೆ ಸೇರಿದ್ದೇನೆ ಹಾಗಾಗಿ ಕಾಂಗ್ರೆಸ್ ಗೆ ಮತ ಹಾಕಿದ್ದೇನೆ. ಇದರಲ್ಲಿ ಯಾವುದೇ ಮುಚ್ಚು ಮರೆಯಿಲ್ಲ ಎಂದು ಹೇಳಿದರು.

ಹಿಂದೆ ನಾನು ಕಾಂಗ್ರೆಸ್ ನಿಂದಲೇ ಸಚಿವನಾಗಿದ್ದೆ. ಹಾಗಾಗಿ ಇಂದು ನಾನು ಕಾಂಗ್ರೆಸ್ ಗೆ ಮತ ಹಾಕಿದ್ದೇನೆ. ಈಗ ಕಾಂಗ್ರೆಸ್ ನಾಯಕರನ್ನು ಭೇಟಿಯಾಗುತ್ತೇನೆ. ಕುಮಾರಸ್ವಾಮಿಯವರು ಸಿಟ್ಟಾದರೆ ಆಗಲಿ ಬಿಡಿ. ರಾಜಕೀಯದಲ್ಲಿ ಇದೆಲ್ಲ ಕಾಮನ್ ಎಂದು ಹೇಳಿದರು.
ಹೆಚ್.ಡಿ.ರೇವಣ್ಣ ಮತ ಅಸಿಂಧುಗೊಳಿಸುವಂತೆ ಬಿಜೆಪಿ ದೂರು

Related Articles

Back to top button