Kannada NewsLatestNational

*ಹೇಗಿದೆ ನೋಡಿ ರಾಮಲಲ್ಲಾ ಗರ್ಭಗುಡಿಯ ಅದ್ಭುತವಾದ ಚಿನ್ನದ ಬಾಗಿಲು*

ಅಯೋಧ್ಯೆ ರಾಮ ಮಂದಿರದಲ್ಲಿ ಜನವರಿ 22ರಂದು ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಇಂದಿನಿಂದ ರಾಮ ಮಂದಿರದಲ್ಲಿ ಪೂಜಾ ವಿಧಿವಿಧಾನಗಳು ಆರಂಭವಾಗಿವೆ. ರಾಮಲಲ್ಲಾ ಗರ್ಭಗುಡಿಯ ಚಿನ್ನದ ಬಾಗಿಲು ನಿರ್ಮಾಣ ಪೂರ್ಣಗೊಂಡಿದೆ.

ಭಗವಾನ್ ಶ್ರೀರಾಮಲಲ್ಲಾ ದೇವರ ಗರ್ಭಗೃಹದ ಚಿನ್ನದ ಬಾಗಿಲುಗಳ ಸ್ಥಾಪನೆ ಕಾರ್ಯ ಮುಗಿದಿದ್ದು, ರಾಮ ಮಂದಿರದ ನೆಲಮಹಡಿಯಲ್ಲಿನ ಎಲ್ಲಾ ಚಿನ್ನದ ಬಾಗಿಲುಗಳ ಸ್ಥಾಪನೆ ಕಾರ್ಯ ಪೂರ್ಣಗೊಂಡಿದೆ. ಈ ಬಗ್ಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ನೀಡಿದೆ.

ಗರ್ಭಗುಡಿಯ ಚಿನ್ನ ಲೇಪಿತ ಬಾಗಿಲುಗಳ ನಿರ್ಮಾಣ ಕಾರ್ಯ ಮುಗಿದಿದ್ದು, ಎಲ್ಲಾ ಬಾಗಿಲುಗಳನ್ನು ಹೈದರಾಬಾದ್ ಮೂಲದ ಕುಶಲಕರ್ಮಿಗಳು ಮಾಡಿದ್ದಾರೆ.

ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಿಸಲಾಗಿರುವ ರಾಮ ಮಂದಿರ ಸಂಕಿರ್ಣವು 380 ಅಡಿ ಉದ್ದ 250 ಅಡಿ ಅಗಲ ಮತ್ತು 161 ಅಡಿ ಎತ್ತರವನ್ನು ಹೊಂದಿರುವುದು ಗಮನಾರ್ಹ.

ರಾಮ ಮಂದಿರದ ಪ್ರತಿ ಮಹಡಿ 20 ಅಡಿ ಎತ್ತರ ಇರಲಿದೆ. ಒಟ್ಟಾರೆ ದೇವಾಲಯವು 392 ಕಂಬಗಳು ಹಾಗೂ 44 ದ್ವಾರಗಳನ್ನು ಹೊಂದಿವೆ.


Related Articles

Back to top button