ಮಠ ಹಾಗೂ ಭಕ್ತರ ನಡುವೆ ತಾರಕ್ಕೇರಿದ ಆಕ್ರೋಶ
ಪ್ರಗತಿವಾಹಿನಿ ಸುದ್ದಿ: ಕಲಾದಗಿಯ ರಂಭಾಪುರಿ ಪಂಚಗೃಹ ಗುರುಲಿಂಗೇಶ್ವರ ಮಠದ ಪೀಠಾಧಿಪತಿ ಆಯ್ಕೆ ವಿಚಾರವಾಗಿ ಭಕ್ತರು ಹಾಗೂ ಸ್ವಾಮೀಜಿ ನಡುವಿನ ವಿವಾದ ತಾರಕ್ಕೇರಿದೆ. ವಿವಾದ ಕೋರ್ಟ್ ನಲ್ಲಿ ಇರುವಾಗಲೇ ಗಂಗಾಧರ ಸ್ವಾಮೀಜಿ ಮಠಕ್ಕೆ ಸೇರಿದ ಜಮೀನು ಉಳುಮೆ ಮಾಡಿದ್ದಾರೆ. ಇದರಿಂದ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದು ಪ್ರತಿಭಟನೆ ತೀವ್ರಗೊಳಿಸಿದ್ದಾರೆ.
ಮಠದ ಬಳಿ ಜಮಾವಣೆಗೊಂಡು ಪ್ರತಿಭಟನೆ ನಡೆಸುತ್ತಿದ್ದ ಭಕ್ತರು ರಂಭಾಪುರಿ ಶ್ರೀ ಕಾರಿನ ಮೇಲೆ ಚಪ್ಪಲಿ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯೊಬ್ಬರು ಚಪ್ಪಲಿಯನ್ನು ರಂಭಾಪುರಿ ಶ್ರೀ ಕಾರಿನ ಮೇಲೆ ಎಸೆದಿದ್ದಾರೆ.
ರಂಭಾಪುರಿ ಶ್ರೀ ಕಲಾದಗಿ ಮಾರ್ಗವಾಗಿ ಉದಗಟ್ಟಿ ಗ್ರಾಮಕ್ಕೆ ಅಡ್ಡಪಲ್ಲಕ್ಕಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ಈ ವೇಳೆ ಭಕ್ತರು ರಂಭಾಪುರಿ ಶ್ರೀ ಕಾರನ್ನು ಅಡ್ಡಗಟ್ಟಿ ಧಿಕ್ಕಾರ ಕೂಗಿದ್ದಾರೆ. ಮಹಿಳಾ ಭಕ್ತರೊಬ್ಬರು ರಂಭಾಪುರಿ ಶ್ರೀ ಕಾರಿನ ಮೇಲೆ ಚಪ್ಪಲಿ ಎಸೆದಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ