
ಪ್ರಗತಿ ವಾಹಿನಿ ಸುದ್ದಿ ಮುಂಬೈ –
ರಾಜಮೌಳಿ ನಿರ್ದೇಶನದ ಜ್ಯೂ. ಎನ್‌ಟಿಆರ್ ಮತ್ತು ರಾಮ್‌ಚರಣ್ ತೇಜಾ ಅಭಿನಯದ ಆರ್‌ಆರ್‌ಆರ್ ಚಿತ್ರ ಯಶಸ್ಸಿನ ಶಿಖರದತ್ತ ಮುನ್ನುಗುತ್ತಿದೆ. ಬಾಕ್ಸ್ ಆಫಿಸಿನ ಈವರೆಗಿನ ದಾಖಲೆಗಳನ್ನೆಲ್ಲ ಗುಡಿಸಿ ಹಾಕುತ್ತಿರುವ ಈ ಚಿತ್ರದ ಯಶಸ್ಸಿಗೆ ತೆರೆಯ ಹಿಂದೆಯೂ ಅನೇಕರ ಶ್ರಮವಿದೆ.
ಪ್ರೊಡಕ್ಷನ್ ಮ್ಯಾನೇಜರ್‌ಗಳಿಂದ ಹಿಡಿದು ಲೈಟ್ ಬಾಯ್‌ಗಳವರೆಗೆ ಇವರೆಲ್ಲರ ಶ್ರಮಕ್ಕೆ ಋಣ ಸಂದಾಯ ಮಾಡುವ ನಿಟ್ಟಿನಲ್ಲಿ ಚಿತ್ರದ ನಾಯಕರಲ್ಲಿ ಒಬ್ಬರಾದ ರಾಮ್‌ಚರಣ್ ತೇಜ ಶ್ಲಾಘನೀಯ ಕಾರ್ಯ ಮಾಡಿದ್ದಾರೆ.
ಹೈದರಾಬಾದ್ ತಮ್ಮ ನಿವಾಸಕ್ಕೆ ಆರ್‌ಆರ್‌ಆರ್ ಚಿತ್ರದಲ್ಲಿ ದುಡಿದ ೩೫ ಸಿಬ್ಬಂದಿಯನ್ನು ಊಟಕ್ಕೆ ಕರೆದ ತೇಜ ಜೊತೆಗೆ ಎಲ್ಲರಿಗೂ ತಲಾ ೧೧.೮ ಗ್ರಾಂ ತೂಕದ ಬಂಗಾರದ ನಾಣ್ಯವನ್ನು ಉಡುಗೊರೆಯಾಗಿ ನೀಡಿದ್ದಾರೆ.
ಇನ್ನು ಆರ್‌ಆರ್‌ಆರ್ ಚಿತ್ರ ಬಾಕ್ಸ್ ಆಫೀಸಿನಲ್ಲಿ ಕೊಳ್ಳೆ ಹೊಡೆಯುತ್ತಿದ್ದು ಗಳಿಕೆಯಲ್ಲಿ ೯೦೦ ಕೋಟಿ ರೂ. ಗಡಿ ದಾಟಿದೆ. ೯೦೦ ಕೋಟಿ ರೂ. ಗಡಿ ದಾಟಿದ ಐದನೇ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಯೂ ಈ ಚಿತ್ರದ್ದಾಗಿದೆ.
ನನ್ನಲ್ಲೊಂದು ಮ್ಯಾನುಫ್ಯಾಕ್ಚರಿಂಗ್ ಡಿಫೆಕ್ಟ್ ಇದೆ ಎಂದ ಅಮೀತ್ ಷಾ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ