Kannada NewsKarnataka News

ರಮೇಶ್ ಜಾರಕಿಹೊಳಿ ಸಾಮರ್ಥ್ಯ ಒಂದೇ ಅಭ್ಯರ್ಥಿ ಗೆಲ್ಲಿಸೋದು: ಇನ್ನೊಬ್ಬರು ಸೋಲೋದು ಅನಿವಾರ್ಯ – ಸತೀಶ್ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರಿಗಿರೋದು ಒಂದು ಅಭ್ಯರ್ಥಿ ಗೆಲ್ಲಿಸುವ ಸಾಮರ್ಥ್ಯ. ಕಾಂಗ್ರೆಸ್ ಗೆ ಕೂಡ ಒಂದು ಅಭ್ಯರ್ಥಿ ಗೆಲ್ಲಿಸಿಕೊಳ್ಳುವ ಸಾಮರ್ಥ್ಯವಿದೆ. ಹಾಗಾಗಿ ಕವಟಗಿಮಠ ಅಥವಾ ಲಖನ್ ಜಾರಕಿಹೊಳಿ ಇಬ್ಬರಲ್ಲಿ ಒಬ್ಬರು ಸೋಲುವುದು ಖಚಿತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗಿರುವ ಮತ ಸಾಮರ್ಥ್ಯದಿಂದ ಒಬ್ಬರು ಮಾತ್ರ ಗೆಲ್ಲಲು ಸಾಧ್ಯವಿದೆ. ಇಬ್ಬರನ್ನು ಗೆಲ್ಲಿಸುವ ಶಕ್ತಿ ಅವರಿಗಿಲ್ಲ. ಯಾರನ್ನು ಗೆಲ್ಲಿಸುತ್ತಾರೆ ನೋಡೋಣ ಎಂದರು.

ಡಿಕೆ.ಶಿವಕುಮಾರ ರಮೇಶ್ ಜಾರಕಿಹೊಳಿ ಅವರಿಗೆ ಅವರೆಂತಹ ದೊಡ್ಡ ಸಾಹುಕಾರ್ ಎಂದಿದ್ದರಲ್ಲಿ ಏನೂ ವಿಶೇಷವಿಲ್ಲ. ಅದು ರಾಜಕೀಯ ಹೇಳಿಕೆ. ಅವೆಲ್ಲ ರಾಜಕೀಯದಲ್ಲಿ ಸಹಜ ಎಂದೂ ಅವರು ತಿಳಿಸಿದರು.

ಕಳೆದ ಬಾರಿ ನಮ್ಮ ನಿರ್ಲಕ್ಷ್ಯದಿಂದ ವೀರಕುಮಾರ ಪಾಟೀಲ ಸೋಲಬೇಕಾಯಿತು. ಈ ಬಾರಿ ಕಾಂಗ್ರೆಸ್ ಮತಗಳು ಭದ್ರವಾಗಿವೆ. ಬಿಜೆಪಿಯವರು ತಮ್ಮಲ್ಲಿರುವ ಗೊಂದಲವನ್ನು ಪರಿಹರಿಸಿಕೊಳ್ಳಲಿ. ನಮ್ಮಲ್ಲೇನೂ ಸಮಸ್ಯೆ ಇಲ್ಲ ಎಂದು ಸತೀಶ್ ಹೇಳಿದರು.

ಗೋಕಾಕ, ಅರಬಾವಿ ಕ್ಷೇತ್ರದಲ್ಲಿ ನಮಗೂ ಸಾಕಷ್ಟು ಮತಗಳು ಬರುತ್ತವೆ. ಲಕ್ಷ್ಮಿ ಹೆಬ್ಬಾಳಕರ್ ಅವರಿಗೂ ಅಲ್ಲಿ ಸಾಕಷ್ಟು ಸಂಪರ್ಕವಿದೆ. ಅರಬಾವಿಯಲ್ಲಿ ಲೋಕಸಭಾ ಚುನಾವಣೆಯಲ್ಲಿ ನಮ್ಮದೇ ಲೀಡ್ ಆಗಿತ್ತು. ಹಾಗಾಗಿ ಅಲ್ಲಿನ ಮತಗಳು ಬಿಜೆಪಿಗೆ ಅಥವಾ ಲಖನ್ ಗೆ ಹೋಗುತ್ತವೆ ಎನ್ನುವುದು ಸರಿಯಲ್ಲ ಎಂದರು.

ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ನಮ್ಮದೇ ಮತ ಬ್ಯಾಂಕ್ ಇದೆ. ಇದರಿಂದಾಗಿ ಸುಲಭವಾಗಿ ನಾವು ಗಲ್ಲುತ್ತೇವೆ ಎಂದೂ ಹೇಳಿದರು.

ಕುತೂಹಲ ಮೂಡಿಸಿದ ರಮೇಶ್ ಜಾರಕಿಹೊಳಿ 2 ಹೇಳಿಕೆಗಳು: ಅಭಿಮಾನಿಗಳಲ್ಲಿ ಖಾತರ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button