ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮಾಜಿ ಸಚಿವ ರಮೇಶ ಜಾರಕಿಹೊಳಿ ತಮ್ಮ ಗೇಮ್ ಪ್ಲ್ಯಾನ್ ಮತ್ತೆ ಬದಲಾಯಿಸಿದಂತಿದೆ.
ನಿನ್ನೆ ರಸ್ತೆ ಮೂಲಕ ಬೆಂಗಳೂರಿಗೆ ತೆರಳುತ್ತಿರುವುದಾಗಿ ಹೇಳಲಾಗಿತ್ತು. ಅಲ್ಲಿ ಮುಖ್ಯಮಂತ್ರಿ ಸೇರಿದಂತೆ ಬಿಜೆಪಿ ಮುಖಂಡರ ಜೊತೆಗೆ ಚರ್ಚಿಸಬೇಕಿತ್ತು.
ಆದರೆ ಅವರು ಬೆಂಗಳೂರಿಗೆ ಹೊಗಲೇ ಇಲ್ಲ. ಬದಲಾಗಿ ಇಂದು ಬೆಳಗಾವಿಯಿಂದ ವಿಶೇಷ ವಿಮಾನದ ಮೂಲಕ ಮೈಸೂರಿಗೆ ತೆರಳುತ್ತಿದ್ದಾರೆ. ಈಗ 10.45ಕ್ಕೆ ರಮೇಶ ಜಾರಕಿಹೊಳಿ ಮೈಸೂರಿಗೆ ತೆರಳಿ ಸುತ್ತೂರು ಮಠಕ್ಕೆ ಭೇಟಿ ನೀಡಲಿದ್ದಾರೆ.
ಜೂನ್ 23ರಂದು ಮುಂಬೈಯಿಂದ ನೇರವಾಗಿ ಸುತ್ತೂರು ಮಠಕ್ಕೆ ತೆರಳಿ ಸ್ವಾಮಿಗಳನ್ನು ಭೇಟಿ ಮಾಡಿ ಬಂದ ನಂತರ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ವರದಿಯಾಗಿತ್ತು. ಆದರೆ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್ ಭೇಟಿ ಬಳಿಕ ರಾಜಿನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎಂದು ಹೇಳಲಾಗಿತ್ತು.
ಆದರೆ ಈಗ ಏಕಾ ಏಕಿ ತಮ್ಮ ಪ್ಲ್ಯಾನ್ ಬದಲಿಸಿದಂತಿದೆ. ಈಗ ಸುತ್ತೂರು ಮಠಕ್ಕೆ ಅವರು ಭೇಟಿ ನೀಡುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅವರ ಮುಂದಿನ ನಡೆ ಯಾವ ರೀತಿಯಲ್ಲಿರುತ್ತದೆ ಎನ್ನುವ ಕುತೂಹಲ ಮೂಡಿಸಿದೆ.
ಈಗಾಗಲೆ ಶಾಸಕ ಅರವಿಂದ ಬೆಲ್ಲದ ಸುತ್ತೂರು ಮಠಕ್ಕೆ ಭೇಟಿ ನೀಡಿ ಸ್ವಾಮಿಗಳನ್ನು ಭೇಟಿ ಮಾಡಿ ಬಂದಿದ್ದಾರೆ.
ಈ ಎಲ್ಲ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.
ಬೆಂಗಳೂರಿಗೆ ಹೊರಟ ರಮೇಶ ಜಾರಕಿಹೊಳಿ: ವರ್ಕೌಟ್ ಆಗುತ್ತಾ ಪ್ಲ್ಯಾನ್?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ