ಸಂಕಲ್ಪ ಸಮಾವೇಶದಲ್ಲಿ ಹಲವು ವಿಷಯಗಳನ್ನು ಹೊರಹಾಕಿದ ರಮೇಶ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿ, ಗೋಕಾಕ:
ಆಪರೇಷನ್ ಕಮಲ ಆಗಲು ಸತೀಶ್, ಎಂ ಬಿ ಪಾಟೀಲ್ ಕಾರಣ. ಮಂತ್ರಿ ಆದ ತಕ್ಷಣ ಬಿಟ್ಟು ಓಡಿ ಹೋದರು. ಅಲ್ಲದೇ ನನ್ನ ಮನೆಗೆ ಬರುತ್ತಿದ್ದ ಶಾಸಕರುಗಳಲ್ಲಿ ನಾಲ್ವರು ಸಚಿವ ಸ್ಥಾನ ಪಡೆದರು. ೧೪ ಜನ ಶಾಸಕರು ನಿಗಮ ಮಂಡಳಿ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಅವರು, ಶನಿವಾರ ನಗರದ ತಮ್ಮ ಕಾರ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಸಂಕಲ್ಪ ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಕೆಲವು ಶಾಸಕರು ಸಚಿವ ಸ್ಥಾನ, ನಿಗಮ ಮಂಡಳಿ ಸ್ಥಾನ ನೀಡುತ್ತಿದ್ದಂತೆ ದೂರವಾದರು. ಆದರೆ ನನ್ನನ್ನು ನಂಬಿ ೨೦ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ೨೦ ಶಾಸಕರ ಪರ ಕಾನೂನು ಹೋರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ವಾಸ್ತವ್ಯ ಮಾಡಿದ್ದೆನೆ ಎಂದರು.
ಪ್ಯಾಕೆಜ್ ಪಡೆದಿದ್ದಾರೆ
ನನ್ನ ವಿರುದ್ಧ ಪ್ರಸಾರ ಮಾಡಲು ಕೆಲವು ಮಾಧ್ಯಮಗಳವರು ಪ್ಯಾಕೆಜ್ ಪಡೆದಿದ್ದಾರೆ. ನನ್ನ ವಿರುದ್ಧ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಅಂತವರ ವಿರುದ್ಧ ಕಾನೂನು ಸಮರಕ್ಕೂ ರೆಡಿಯಾಗುತ್ತೇನೆ ಎಂದು ಹೇಳಿದರು.
ಎಲೆಕ್ಟ್ರಾನಿಕ್ ಮಾಧ್ಯಮವೊಂದರಲ್ಲಿ ಮಹೇಶ ಕುಮಟಳ್ಳಿ ಅವರಿಗೆ ನಾನು ಬೆನ್ನಿಗೆ ಚೂರಿ ಹಾಕಿದ್ದೆನೆ ಎಂದು ಆರೋಪ ಬಂದಿದೆ. ಈ ಕಾರ್ಯಕ್ರಮದಲ್ಲೆ ಮಹೇಶ ಕುಮಟಳ್ಳಿ ಭಾಗವಹಿಸಿದ್ದಾರೆ. ನಾನು ಅವರಿಗೆ ಚೂರಿ ಹಾಕಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ದ ಎಂದು ಸವಾಲೆಸೆದರು.
ಆಪರೇಷನ್ ಕಮಲ ಆಗಲು ಸತೀಶ್, ಎಂ ಬಿ ಪಾಟೀಲ್ ಕಾರಣ. ಮಂತ್ರಿ ಆದ ತಕ್ಷಣ ಬಿಟ್ಟು ಓಡಿ ಹೋದರು. ಬೇಕಾದರೆ ನಾನು ಗೋಕಾಕ ಗ್ರಾಮ ದೇವತೆ ಲಕ್ಷ್ಮೀ ದೇವರ ಮೇಲೆ ಪ್ರಮಾಣ ಮಾಡಲು ಸಿದ್ಧ. ಯಮಕನಮರಡಿ ಕ್ಷೇತ್ರದಲ್ಲಿ ಸತೀಶ ಜಾರಕಿಹೊಳಿ ಅವರನ್ನು ಒದ್ದು ಓಡಿಸಿದ್ದಾರೆ. ಹೀಗಾಗಿ ಸತೀಶ ಜಾರಕಿಹೊಳಿ ಗೋಕಾಕ ಕ್ಷೇತ್ರಕ್ಕೆ ಬರುತ್ತಿದ್ದಾರೆ.
ಸಿದ್ದರಾಮಯ್ಯ ಸರ್ಕಾರದಲ್ಲಿ ನಮ್ಮ ಕೆಲಸಗಳು ಆಗಿವೆ. ನಾನು ಮಂತ್ರಿ ಪದವಿಗೆ ಹಾಗೂ ದುಡ್ಡಿಗೆ ಬಲಿಯಾಗಿಲ್ಲ. ನಮ್ಮ ಮೇಲೆ ಹಾಗೂ ಅಥಣಿ ಕ್ಷೇತ್ರದ ವಿಚಾರದಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಅನ್ಯಾಯವಾಗಿದೆ. ಕ್ಷೇತ್ರದ ಜನರಿಗೆ ಮುಖ ಹೇಗೆ ತೋರಿಸಲಿ ಎಂದು ಭಯವಿತ್ತು. ಸಮ್ಮಿಶ್ರ ಸರ್ಕಾರದಲ್ಲಿ ಒಂದು ಸಣ್ಣ ಕೆಲಸವೂ ಸಹ ಆಗಲಿಲ್ಲ. ಕಾಂಗ್ರೇಸ್ ಪಕ್ಷದ ಮುಖಂಡರಾದ ಸಿದ್ದರಾಮಯ್ಯ, ಖರ್ಗೆ ಅವರಿಗೆ ಅನೇಕ ಭಾರಿ ಹೇಳಿದ್ದೇವೆ. ಆದರೆ ಸಮ್ಮಿಶ್ರ ಸರಕಾರ ನಮಗೆ ಅನ್ಯಾಯ ಮಾಡಿದೆ ಎಂದರು.
ಇನ್ನೂ ೧೦-೧೫ ಕಾಂಗ್ರೆಸ್ ಶಾಸಕರು ನಮ್ಮ ಜತೆಗೆ ಬರೋಕೆ ಸಿದ್ದರಿದ್ದಾರೆ. ಸ್ಪೀಕರ್ ಅನರ್ಹತೆ ಮಾಡಿದ್ದು ಕಾನೂನು ಬಾಹಿರ. ಸ್ಪೀಕರ್ ಅನರ್ಹತೆ ಮಾಡುವ ಮೊದಲು ಸುಪ್ರೀಂ ಕೋರ್ಟನಲ್ಲಿ ತಡೆ ಹಿಡಿಯಲಾಗಿತ್ತು. ಹೀಗಾಗಿ ದೇವರ ಆಶೀರ್ವಾದದಿಂದ ಸುಪ್ರೀಂ ಕೋರ್ಟ್ ನಿಂದ ೧೫ ದಿನಗಳಲ್ಲಿ ನ್ಯಾಯ ಸಿಗಲಿದೆ. ಅಲ್ಲದೇ ನಾಳೆಯೇ ಉಪಚುನಾವಣೆ ನಡೆದರೂ ನಿಲ್ಲಲು ನನಗೆ ಅವಕಾಶ ಇದೆ.
ಸತೀಶ ಜಾರಕಿಹೊಳಿ ಮೋಸ ಮಾಡಿದ್ದಾರೆ. ಬುದ್ಧ, ಬಸವ ಹೆಸರಲ್ಲಿ ಜನರ ಜಮೀನು ಹೊಡೆದಿದ್ದಾರೆ. ೧ ಸಾವಿರ ಎಕರೆ ಜಮೀನು ತೆಗೆದುಕೊಂಡಿದ್ದಾರೆ.
ಆಪರೇಷನ್ ಕಮಲ ಆಗಲು ಸತೀಶ್, ಎಂ ಬಿ ಪಾಟೀಲ್ ಕಾರಣ. ಮಂತ್ರಿ ಆದ ತಕ್ಷಣ ಬಿಟ್ಟು ಓಡಿ ಹೋದರು. ಬೇಕಾದರೆ ನಾನು ಗೋಕಾಕ ಗ್ರಾಮ ದೇವತೆ ಲಕ್ಷ್ಮೀ ದೇವರ ಮೇಲೆ ಪ್ರಮಾಣ ಮಾಡಲು ಸಿದ್ಧ. ಯಮಕನಮರಡಿ ಕ್ಷೇತ್ರದಲ್ಲಿ ಸತೀಶ ಜಾರಕಿಹೊಳಿ ಅವರನ್ನು ಒದ್ದು ಓಡಿಸಿದ್ದಾರೆ. ಹೀಗಾಗಿ ಸತೀಶ ಜಾರಕಿಹೊಳಿ ಗೋಕಾಕ ಕ್ಷೇತ್ರಕ್ಕೆ ಬರುತ್ತಿದ್ದಾರೆ.
ಮೋಸ ಮಾಡಿದ್ದಾರೆ
ನನ್ನ ಹಾಗೂ ಲಖನ್ ಜಾರಕಿಹೊಳಿ ಸೋಲಿಸುವ ಉದ್ದೇಶ ಹಾಗೂ ಮುಂದೆ ಗೋಕಾಕ ಕ್ಷೇತ್ರಕ್ಕೆ ಬರೋ ಪ್ಲ್ಯಾನ್ ಸತೀಶ ಜಾರಕಿಹೊಳಿ ಮಾಡಿದ್ದಾರೆ. ಗೋಕಾಕ ಕ್ಷೇತ್ರದಲ್ಲಿ ಸತೀಶ ಜಾರಕಿಹೊಳಿ ಕುತಂತ್ರ ನಡೆಸಿದ್ದಾರೆ.
ಸತೀಶ ಜಾರಕಿಹೊಳಿ ಮೋಸ ಮಾಡಿದ್ದಾರೆ. ಬುದ್ಧ, ಬಸವ ಹೆಸರಲ್ಲಿ ಜನರ ಜಮೀನು ಹೊಡೆದಿದ್ದಾರೆ. ೧ ಸಾವಿರ ಎಕರೆ ಜಮೀನು ತೆಗೆದುಕೊಂಡಿದ್ದಾರೆ. ಸತೀಶ ಜಾರಕಿಹೊಳಿ ಗೆಳೆಯರು ತುತ್ತೂರಿ ಬಾರಿಸೋವರು. ಸತೀಶ ಜಾರಕಿಹೊಳಿ ಏನೆ ಮಾಡಿದರೂ ಎದುರಿಸಲು ಸಿದ್ದ. ನನಗೆ ಲಖನ್ ಗೆ ಸತೀಶ ಜಗಳವನ್ನು ಹಚ್ಚಿದ್ದಾರೆ. ನಾನ್ಯಾರಿಗೂ ಮೋಸ ಮಾಡಿಲ್ಲ. ಲಖನ ಜಾರಕಿಹೊಳಿ ಬಲಿಪಶು ಮಾಡಲು ಸತೀಶ್ ಯತ್ನ ನಡೆಸಿದ್ದಾರೆ. ನನ್ನ ಪಿಎಗಳನ್ನು ಬೈಯುವ ಮಟ್ಟಿಗೆ ಸತೀಶ್ ಜಾರಕಿಹೊಳಿ ಬಂದಿದ್ದಾರೆ. ಅವರು ಗಂಡಸಾಗಿದ್ದರೆ ಯಮಕನಮರಡಿ ಕ್ಷೇತ್ರದ ಮುಂದಿನ ಚುನಾವಣೆಯಲ್ಲಿ ಗೆದ್ದು ತೋರಿಸಲಿ ನೋಡೊಣ. ನಾಳೆ ಉಪ ಚುನಾವಣೆ ಬಂದ್ರು ಎದುರಿಸಲು ನಾನು ಸಿದ್ದ ಎಂದು ಸಹೋದರ ಸತೀಶ್ ವಿರುದ್ಧ ವಾಗ್ದಾಳಿ ನಡೆಸಿದರು.
ಡಿಕೆ ಶಿವಕುಮಾರ್ ಅವರಿಗೆ ದೇವರು ಒಳ್ಳೆಯದು ಮಾಡಲಿ, ಕಾನೂನು ಹೋರಾಟದಲ್ಲಿ ಅವರಿಗೆ ನ್ಯಾಯ ಸಿಗಲಿ. ಯಾವ ಪಕ್ಷ ಸೇರಬೇಕೆಂದು ಇನ್ನೂ ನಿರ್ಧಾರ ಕೈಗೊಂಡಿಲ್ಲ. ಅನರ್ಹ ಪ್ರಕರಣ ತಿರ್ಮಾನದ ನಂತರ ನಿರ್ಧಾರ ಮಾಡುತ್ತೆನೆ.
ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಲು ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಕೇದಾರಕ್ಕೆ ಮೋಜು ಮಸ್ತಿ ಮಾಡಲು ಹೋಗಿಲ್ಲ. ಕಳೆದ ೩೨ ವರ್ಷದಲ್ಲಿ ೧೪ ಭಾರಿ ಹೋಗಿದ್ದೇನೆ.
ಡಿಸಿಎಮ್ ಆಸೆಗೆ ಬಲಿಯಾಗಿಲ್ಲ:
ಕಳೆದ ಮೈತ್ರಿ ಸರಕಾರದಲ್ಲಿ ಕುಮಾರಸ್ವಾಮಿಯವರು ಪ್ರಬಲ ಪವರ್ ಮಿನಿಸ್ಟರ್ ಖಾತೆ ಜೊತೆಗೆ ಡಿಸಿಎಮ್ ಹುದ್ದೆ ನಿಡುವುದಾಗಿ ಹೇಳಿದ್ದರು. ಆದರೆ ನಾನು ಅಧಿಕಾರದ ಆಸೆ ಆಮಿಷಕ್ಕೆ ಒಳಗಾಗಿಲ್ಲ. ಪಕ್ಷದಲ್ಲಿ ಆಗುತ್ತಿರುವ ಅನ್ಯಾಯ ಖಂಡಿಸಿ ಹೊರಬಂದಿದ್ದೆನೆ.
ವೀರಶೈವ, ಲಿಂಗಾಯತ ಸಮಾಜದ ಮುಖಂಡ ಪ್ರತ್ಯಕ್ಷ:
ಮಂಡ್ಯದಿಂದ ಆಗಮಿಸಿದ್ದ ವೀರಶೈವ ಲಿಂಗಾಯತ ಸಮಾಜದ ಮುಖಂಡ ಹುಲಿಕಲ್ ಶಿವಗಂಗಯ್ಯ ಸಮಾವೇಶದಲ್ಲಿ ಮಾತನಾಡಿ, ಬಿಜೆಪಿ ಸರ್ಕಾರ ಬರಲು ರಮೇಶ ಜಾರಕಿಹೊಳಿ ಕಾರಣ. ಹೀಗಾಗಿ ಉಪ ಚುನಾವಣೆ ಗೆಲ್ಲಲು ವೀರಶೈವ, ಲಿಂಗಾಯತ ಸಮಾಜದಿಂದ ಬೆಂಬಲ ನೀಡಲಾಗುವುದು ಎಂದು ಮಾತನಾಡಿ ಬೆಂಬಲ ಪತ್ರ ನೀಡಿದರು.
ಎಂದೂ ಕಂಡರಿಯದ ಪ್ರವಾಹ ಗೋಕಾಕಕ್ಕೆ ಎದುರಾಗಿದ್ದು, ಪ್ರವಾಹ ಸಂದರ್ಭದಲ್ಲಿ ಗೋಕಾಕ ಕ್ಷೇತ್ರದಲ್ಲಿ ಹಾನಿಗೊಳಗಾದ ಕುಟುಂಬಗಳಿಗೆ ಪುನರ್ ವಸತಿ ಕಲ್ಪಿಸಿಕೊಡಲು ನಾನು ಸಿದ್ದ. ನಾನು ಈ ಬಗ್ಗೆ ಪ್ರತಿಜ್ಞೆ ಮಾಡುತ್ತೇನೆ ಎಂದು ರಮೇಶ ಜಾರಕಿಹೊಳಿ ಹೇಳಿದರು.
ಮಳೆಯ ನಡುವೆ ಭಾಷಣ ಕೇಳಿದ ಜನರು:
ಗೋಕಾಕ ನಗರದಲ್ಲಿ ನಡೆದ ಸಂಕಲ್ಪ ಸಮಾವೇಶದಲ್ಲಿ ರಮೇಶ ಜಾರಕಿಹೊಳಿ ಮಾತು ಆರಂಭಿಸುತ್ತಿದಂತೆ ಭಾರೀ ಮಳೆ ಸುರಿಯಲಾರಂಭಿಸಿತು. ಆದರೆ ರಮೇಶ ಜಾರಕಿಹೊಳಿ ಅಭಿಮಾನಿಗಳು ಮಳೆಯ ನಡುವೆಯೂ ಸಾಹುಕಾರ್ ಭಾಷಣ ಕೇಳಿದರು.
ಇದಕ್ಕೂ ಮುಂಚೆ ಜಿಪಂ ಸದಸ್ಯ ಟಿ ಆರ್ ಕಾಗಲ ಹಾಗೂ ನಗರಸಭೆ ಹಿರಿಯ ಸದಸ್ಯ ಎಸ್ ಎ ಕೋತವಾಲ, ಅಶೋಕ ಅಸುದೇ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯ ಮೇಲೆ ಅನರ್ಹ ಶಾಸಕ ಮಹೇಶ ಕುಮಟಳ್ಳಿ, ತಾಪಂ ಅಧ್ಯಕ್ಷೆ ಸುನಂದಾ ಕರದೇಸಾಯಿ, ಎಪಿಎಮ್‌ಸಿ ಅಧ್ಯಕ್ಷ ಅಡಿವೆಪ್ಪ ಕಿತ್ತೂರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಡೋಣಿ, ಮುಖಂಡರುಗಳಾದ ಆನಂದ ಚೋಪ್ರಾ, ಡಿ ಎಮ್ ದಳವಾಯಿ, ಸಿದ್ಧಲಿಂಗ ದಳವಾಯಿ, ರಾಜು ತಳವಾರ, ಪ್ರಕಾಶ ಕರನಿಂಗ, ವಿನೋದ ಕರನಿಂಗ, ಕಿರಣ ಡಮಾಮಗರ, ಎಚ್ ಡಿ ಮುಲ್ಲಾ, ಸುಧೀರ ಜೊಡಟ್ಟಿ, ಅಬ್ಬಾಸ ದೇಸಾಯಿ, ತಾಪಂ ಉಪಾಧ್ಯಕ್ಷ ಯಲ್ಲಪ್ಪ ನಾಯಕ ಸೇರಿದಂತೆ ಇತರರು ಇದ್ದರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ