Belagavi NewsBelgaum NewsKannada NewsKarnataka NewsLatestPolitics

*ವಿದ್ಯುತ್ ಚಾಲಿತ ಮಗ್ಗಗಳಿಗೆ ಗುಡ್ ನ್ಯೂಸ್: ಉಚಿತ ವಿದ್ಯುತ್ ಘೋಷಣೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: 1 ರಿಂದ 10 ಹೆಚ್.ಪಿ. ವಿದ್ಯುತ್ ಸಂಪರ್ಕ ಪಡೆದ ವಿದ್ಯುತ್ ಚಾಲಿತ ಮಗ್ಗ ಘಟಕಗಳಿಗೆ ಉಚಿತವಾಗಿ ವಿದ್ಯುತ್ ಪೂರೈಸಿ ಶೂನ್ಯ ಬಿಲ್ ನೀಡಲಾಗುವುದು. ಈ ಕುರಿತು ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ ಎಂದು ಜವಳಿ, ಕಬ್ಬು, ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ್ ಪಾಟೀಲ್ ಹೇಳಿದರು.

ಬೆಳಗಾವಿ ಚಳಿಗಾಲದ ಅಧಿವೇಶನಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕರ ಪ್ರಶ್ನೆಗಳಿಗೆ ಉತ್ತರಿಸಿ ಅವರು ಮಾತನಾಡಿದರು.

10 ಕ್ಕಿಂತ ಹೆಚ್ಚು ಹಾಗೂ 20 ಹೆಚ್.ಪಿ ವರೆಗಿನ ವಿದ್ಯುತ್ ಮಗ್ಗಗಳ 500 ಯುನಿಟ್‌ವರೆಗಿನ ವಿದ್ಯುತ್ ಬಳಕೆಗೆ ಪ್ರತಿ ಯುನಿಟ್‌ಗೆ ರೂ.1.25 ರಿಯಾಯಿತಿ ನೀಡಲಾಗುವುದು. ಜವಳಿ ಘಟಕಗಳ ಸ್ಥಾಪನೆಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರಿಗೆ ಘಟಕ ಯೋಜನಾ ವೆಚ್ಚದ ಮೇಲೆ ಶೇ.75 ರಷ್ಟು ಅಥವಾ ಗರಿಷ್ಠ ಬಂಡವಾಳ ಸಹಾಯಧನ ರೂ.2 ಕೋಟಿವರೆಗೆ ನೀಡಲಾಗುತ್ತಿದೆ. ನೂತನ ಜವಳಿ ನೀತಿ ಅನ್ವಯ ಗರಿಷ್ಠ ರೂ.75 ಲಕ್ಷಗಳ ಅವಧಿ ಸಾಲದ ಮೇಲೆ ಮೊದಲ 5 ವರ್ಷಗಳ ಅವಧಿಗೆ ಬಡ್ಡಿ ಸಹಾಯಧನ ಒದಗಿಸಲಾಗುತ್ತಿದೆ. ಸಾಮಾನ್ಯ ವರ್ಗದವರಿಗೆ ರೂ.1 ಸಹಾಯಧನ ಹಾಗೂ ಅತಿ ಸಣ್ಣ ಜವಳಿ ಘಟಕಗಳಿಗೆ ಶೇ.50 ರಷ್ಟು ಅಥವಾ ಗರಿಷ್ಠ ರೂ.50 ಲಕ್ಷದ ವರೆಗೆ ಸಹಾಯಧನ ನೀಡಲಾಗುವುದು ಎಂದರು.

Home add -Advt

ಪರಿಷ್ಕೃತ ಜವಳಿ ನೀತಿಯ ಅನುಸಾರ ಜವಳಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿ, ರೂ.10,000 ಕೋಟಿ ಬಂಡವಾಳ ಆಕರ್ಷಣೆ ಮಾಡಿ 5 ಲಕ್ಷ ಹೊಸ ಉದ್ಯೋಗಗಳನ್ನು ಸೃಜಿಸುವ ಗುರಿ ಹೊಂದಲಾಗಿದೆ ಎಂದು ಸಚಿವ ಶಿವಾನಂದ ಪಾಟೀಲ್ ತಿಳಿಸಿದರು.

ಬಾಗಲಕೋಟೆ ಹಾಗೂ ಬೆಂಗಳೂರು ಹೊರತು ಪಡಿಸಿದರೆ ರಾಜ್ಯದಲ್ಲೇ ಗರಿಷ್ಠ 16,000 ಕೈಮಗ್ಗಗಳು ದೊಡ್ಡಬಳ್ಳಾಪುರದಲ್ಲಿ ಕಾರ್ಯನಿರ್ವಹಿಸುತ್ತಿವೆ. ಸರ್ಕಾರ ನೇಕಾರರಿಗೆ ನೀಡುವ ಯೋಜನೆಗಳ ಮಿತಿಯನ್ನು ಹೆಚ್ಚಿಸಿ ಅನುದಾನ ನೀಡಬೇಕು. ನೇಕಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಬೇಕು ಎಂದು ಶಾಸಕ ಧೀರಜ್ ಮುನಿರಾಜು ಸಚಿವರಲ್ಲಿ ಕೋರಿದರು.

ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು.ಸಿ.ಬಿ. ಕ್ಷೇತ್ರದಲ್ಲಿ ಬಹಳಷ್ಟು ಜನ ಗಾರ್ಮೆಂಟ್ಸ್ ನಂಬಿ ಜೀವನ ಸಾಗಿಸುತ್ತಿದ್ದಾರೆ. ಅವರೆಲ್ಲಾ ಬೆಂಗಳೂರಿಗೆ ವಲಸೆ ಹೋಗಿ ಕೆಲಸ ಮಾಡುತ್ತಿದ್ದಾರೆ. ಕಷ್ಟದಲ್ಲಿ ಜೀವನ ಸಾಗಿಸುತ್ತಿರುವ ಇವರಿಗೆ ಚಿಕ್ಕನಾಯಕಹಳ್ಳಿಯಲ್ಲಿ ಗಾರ್ಮೆಂಟ್ಸ್ ಸ್ಥಾಪಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.


2024 ರಲ್ಲಿ ನೂತನ ಜವಳಿ ನೀತಿ ರಚನೆಯಾಗಲಿದ್ದು, ನೇಕಾರರಿಗೆ ಹೊಸ ಯೋಜನೆಗಳನ್ನು ರೂಪಿಸಲಾಗುವುದು. ಬೆಂಗಳೂರಿನಲ್ಲಿನ ಗಾರ್ಮೆಂಟ್ಸ್ ಸಾಂದ್ರತೆಯನ್ನು ಕಡಿಮೆ ಮಾಡಲು ಸರ್ಕಾರ ಚಿಂತೆನೆ ನಡೆಸಿದೆ. ರಾಜ್ಯದ ಬೇರೆ ಕಡೆಗಳಲ್ಲೂ ಗಾರ್ಮೆಟ್ಸ್ ಕ್ಲಸ್ಟರ್ ಆರಂಭಿಸುವುದಾಗಿ ಸಚಿವ ಶಿವಾನಂದ ಹೇಳಿದರು.

Related Articles

Back to top button